ಕೈರೋ (ಐಎಎನ್‌ಎಸ್): ಈಜಿಪ್ಟ್‌ನ ಪದಚ್ಯುತ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರು ಸೌದಿ ಅರೇಬಿಯಾದಲ್ಲಿ ಕ್ಯಾನ್ಸರ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಈಜಿಪ್ಟ್‌ನ ಪತ್ರಿಕೆ ಅಲ್-ಅಕ್ಬರ್ ವರದಿ ಮಾಡಿದೆ.
ಮುಬಾರಕ್ ಅವರ ಕುರಿತು ಇದುವರೆಗೆ ಹೊರಬಂದ ಅಧಿಕೃತ ಹೇಳಿಕೆಗಳಿಗೆ ವ್ಯತಿರಿಕ್ತವಾಗಿ ಪತ್ರಿಕೆ ವರದಿ ಮಾಡಿದೆಯಲ್ಲದೆ ತಾಬೌಕ್‌ನ ಮಿಲಿಟರಿ ನೆಲೆಯಲ್ಲಿರುವ 82 ರ ಹರೆಯದ ಮುಬಾರಕ್ ಅವರು ಮೇದೋಜೀರಕ ಗ್ರಂಥಿ ಮತ್ತು ಕರುಳಿನ ಕ್ಯಾನ್ಸರ್‌ಗಾಗಿ ಕೀಮೋಥೆರಪಿ ಗೆ ಒಳಗಾಗಿದ್ದಾರೆ ಎಂದಿದೆ. ಮುಬಾರಕ್ ಕುಟುಂಬದವರು ಅವರೊಡನೆ ಇದ್ದಾರೆ ಎಂದು ತಿಳಿಸಲಾಗಿದೆ.
ಇದೇ ವೇಳೆ ಮುಬಾರಕ್ ಅವರು ಪದಚ್ಯುತಿ ಹೊಂದಿದ ಎರಡು ದಿನಗಳ ಬಳಿಕ ಸೌದಿ ಅರೇಬಿಯಾಕ್ಕೆ ತೆರಳಿದರು ಎಂಬ ವರದಿಯನ್ನು ಈಜಿಪ್ಟ್‌ನ ಸೇನಾ ಪಡೆಗಳ ಮುಖ್ಯಸ್ಥರು ನಿರಾಕರಿಸಿದ್ದರು.
ಮುಬಾರಕ್ ಅವರು ಈಜಿಪ್ಟ್‌ಗೆ ಹಿಂತಿರುಗಿದ್ದಾರೆ ಎಂದು ಕೆಲವು ಪತ್ರಿಕೆಗಳು ಹೇಳಿದ್ದರೆ, ಈಜಿಪ್ಟ್ ಬಿಟ್ಟು ತೆರಳುವುದಕ್ಕೆ ನಿಷೇಧ ಹೇರಲಾಗಿದ್ದು ಅಸ್ಪತ್ರೆಗೆ ದಾಖಲಾಗಿದ್ದಾರೆ ಎಂದು ಮತ್ತೆ ಕೆಲವು ಪತ್ರಿಕೆಗಳು ಹೇಳಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.