ಇಸ್ಲಾಮಾಬಾದ್ (ಪಿಟಿಐ): 2006ರಲ್ಲಿ ನಡೆದ ಬಲೂಚಿಸ್ತಾನದ ಮುಖಂಡ ಅಕ್ಬರ್ ಬುಗ್ಟಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರನ್ನು ಬಂಧಿಸಿ 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಬಲೂಚಿಸ್ತಾನದ ಭಯೋತ್ಪಾದನಾ ನಿಗ್ರಹ ನ್ಯಾಯಾಲಯವು ಮುಷರಫ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿ ಬಂಧಿಸುವಂತೆ ಆದೇಶಿಸಿದ್ದರಿಂದ ಕ್ವೆಟ್ಟಾದಿಂದ ಇಸ್ಲಾಮಾಬಾದ್‌ಗೆ ತೆರಳಿದ ಅಪರಾಧ ವಿಭಾಗದ ಪೊಲೀಸರು ಮುಷರಫ್ ಅವರನ್ನು ಬಂಧಿಸಿದರು.
ಭದ್ರತೆಯ ಕಾರಣಕ್ಕೆ ಮುಷರಫ್ ಅವರನ್ನು ಇಸ್ಲಾಮಾಬಾದ್ ಹೊರವಲಯದ ಚಾಕ್ ಶಹಜಾದ್ ತೋಟದ ಮನೆಯಲ್ಲೇ ನ್ಯಾಯಾಂಗ ಬಂಧನದಲ್ಲಿ ಇರಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.