
ಪ್ರಜಾವಾಣಿ ವಾರ್ತೆ
ನ್ಯೂಯಾರ್ಕ್ (ಪಿಟಿಐ): ಬಾಲಿವುಡ್ `ಸೂಪರ್‌ಸ್ಟಾರ್~ ಸಲ್ಮಾನ್ ಖಾನ್ ಅವರ ಮೇಣದ ಪ್ರತಿಮೆ ಶೀಘ್ರ ಇಲ್ಲಿನ `ಮೇಡಂ ಟುಸ್ಸಾಡ್ಸ್~ ಗ್ಯಾಲರಿಯಲ್ಲಿ ಅನಾವರಣಗೊಳ್ಳಲಿದೆ. ಈ ಹಿಂದೆ ಇಲ್ಲಿ ಅಮಿತಾಭ್ ಬಚ್ಚನ್ ಮತ್ತು ಶಾರೂಕ್ ಖಾನ್ ಅವರ ಮೇಣದ ಪ್ರತಿಮೆಗಳು ಅನಾವರಣಗೊಂಡಿದ್ದವು.
`ಭಾರತದಲ್ಲಿ ಸಲ್ಮಾನ್ ಹೆಸರು ಬಹು ಜನಪ್ರಿಯ. ಅವರ ಅಭಿಮಾನಿಗಳು ಅಮೆರಿಕದಲ್ಲೂ ಸಾಕಷ್ಟಿದ್ದಾರೆ. ಸಲ್ಲು ಅತ್ಯುತ್ತಮ ನಟ ಎಂದು ಗುರುತಿಸಲ್ಪಟ್ಟಿರುವುದರಿಂದ ಅವರ ಮೇಣದ ಪ್ರತಿಮೆಯನ್ನು ತಯಾರಿಸಲಾಗಿದೆ.
ಇದರ ಅನಾವರಣಕ್ಕೆ ಎಲ್ಲ ಸಿದ್ಧತೆ ಮಾಡಿಕೊಳ್ಳಲಾಗಿದೆ~ ಎಂದು ಗ್ಯಾಲರಿಯ ಪ್ರಧಾನ ವ್ಯವಸ್ಥಾಪಕರಾದ ಬ್ರೆಟ್ ಪಿಡ್ಜನ್ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.