ADVERTISEMENT

ಮ್ಯಾನ್ಮಾರ್‌ ಅಧ್ಯಕ್ಷರಾಗಿ ವಿನ್‌ ಮಿಂಟ್‌ ಆಯ್ಕೆ

ಏಜೆನ್ಸೀಸ್
Published 28 ಮಾರ್ಚ್ 2018, 19:30 IST
Last Updated 28 ಮಾರ್ಚ್ 2018, 19:30 IST
ವಿನ್‌ ಮಿಂಟ್‌
ವಿನ್‌ ಮಿಂಟ್‌   

ನೈಪಿತಾವ್: ಮ್ಯಾನ್ಮಾರ್‌ನ ನೂತನ ಅಧ್ಯಕ್ಷರಾಗಿ ಆಂಗ್‌ ಸಾನ್‌ ಸೂಕಿ ಅವರ ಆಪ್ತ ವಿನ್‌ ಮಿಂಟ್‌ ಅವರು ಆಯ್ಕೆಯಾಗಿದ್ದಾರೆ. ಇದರಿಂದಾಗಿ, ಉನ್ನತ ಮಟ್ಟದ ನಿರ್ಧಾರಗಳ ಮೇಲೆ ಹಿಡಿತ ಸಾಧಿಸಲು ಸೂಕಿ ಅವರಿಗೆ ಸಾಧ್ಯವಾಗಲಿದೆ.

ವಿನ್‌ ಮಿಂಟ್‌ ಅವರು ಇದಕ್ಕೂ ಮುನ್ನ ಸ್ಪೀಕರ್‌ ಆಗಿದ್ದರು. ರೋಹಿಂಗ್ಯಾ ಮುಸ್ಲಿಂ ಸಮುದಾಯದವರ ಬಿಕ್ಕಟ್ಟು ಅಂತರರಾಷ್ಟ್ರೀಯ ಮಟ್ಟದಲ್ಲಿ ತಾರಕಕ್ಕೇರಿದಂತೆಯೇ, ಮ್ಯಾನ್ಮಾರ್ ಅಧ್ಯಕ್ಷರಾಗಿದ್ದ ಹಿತಿನ್ ಕಾ ಕಳೆದ ವಾರ ದಿಢೀರನೆ ರಾಜೀನಾಮೆ ನೀಡಿದ್ದರು. ಸಂಸತ್ತಿನಲ್ಲಿ ಮೂರನೇ ಎರಡು ಭಾಗದಷ್ಟು ಮತ ಪಡೆಯುವ ಮೂಲಕ ವಿನ್‌ ಮಿಂಟ್‌ ಈ ಸ್ಥಾನಕ್ಕೆ ಆಯ್ಕೆಯಾದರು.

ವಿದೇಶಿ ವ್ಯಕ್ತಿಯನ್ನು ಸೂಕಿ ಮದುವೆಯಾಗಿದ್ದು, ಮಕ್ಕಳಿಬ್ಬರೂ ಬ್ರಿಟಿಷ್‌ ಪ್ರಜೆಗಳಾಗಿರುವ ಕಾರಣ ಅವರು ಅಧ್ಯಕ್ಷರಾಗುವುದನ್ನು ಸೇನಾ‍ ಕರಡು ಸಂವಿಧಾನ ನಿಷೇಧಿಸಿದೆ.

ADVERTISEMENT

2015ರ ಚುನಾವಣೆಯಲ್ಲಿ ಇವರ ನೇತೃತ್ವದ ನ್ಯಾಷನಲ್ ಲೀಗ್ ಫಾರ್ ಡೆಮಾಕ್ರಸಿ ಪಕ್ಷ ಬಹುಮತಗಳಿಸಿದ್ದರಿಂದ, ಸೂಕಿ ಕೌನ್ಸೆಲರ್‌ ಆಗಿ ನೇಮಕಗೊಂಡರು. ಆದರೆ ಈ ಹುದ್ದೆಗೆ ಸಾಂವಿಧಾನಿಕ ಮಾನ್ಯತೆ ಇರಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.