ADVERTISEMENT

ಮ್ಯಾನ್ಮಾರ್: ಸೇನಾ ಆಡಳಿತಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2011, 19:00 IST
Last Updated 30 ಮಾರ್ಚ್ 2011, 19:00 IST
ಮ್ಯಾನ್ಮಾರ್: ಸೇನಾ ಆಡಳಿತಕ್ಕೆ ತೆರೆ
ಮ್ಯಾನ್ಮಾರ್: ಸೇನಾ ಆಡಳಿತಕ್ಕೆ ತೆರೆ   

ಯಾಂಗೋನ್ (ಡಿಪಿಎ): ಮ್ಯಾನ್ಮಾರ್‌ನ ಸೇನೆ ಬುಧವಾರ ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸಿದ್ದು, ನೂತನ ಅಧ್ಯಕ್ಷರಾಗಿ ಥೆಯಿನ್ ಸಿಯೆನ್ ಪ್ರಮಾಣವಚನ ಸ್ವೀಕರಿಸಿದ್ದಾರೆ. ಇದರಿಂದಾಗಿ ಸುಮಾರು ಅರ್ಧ ಶತಕದಿಂದ ದೇಶದ ಅಧಿಕಾರದ ಚುಕ್ಕಾಣಿ ಹಿಡಿದಿದ್ದ ಸೇನಾ ಆಡಳಿತಕ್ಕೆ ತೆರೆ ಬಿದ್ದಂತಾಗಿದೆ.

ರಾಜಧಾನಿ ನೆಯ್‌ಪಿಯತಾವ್‌ನಲ್ಲಿ ಆಯೋಜನೆಗೊಂಡಿದ್ದ ಸಮಾರಂಭದಲ್ಲಿ ಸೆಯಿನ್ ಪ್ರಮಾಣವಚನ ಸ್ವೀಕರಿಸಿದರು. ಉಪಾಧ್ಯಕ್ಷರುಗಳಾಗಿ ತಿನ್ ಅಂಗ್ ಮಿಯಿಂಟ್ ಊ ಮತ್ತು ಸೈ ಮೌಕ್ ಖಮ್ ಕೂಡಾ ಕ್ರಮವಾಗಿ ಅಧಿಕಾರ ಸ್ವೀಕರಿಸಿದರು. ಸಮಾರಂಭ ಮುಗಿಯುತ್ತಿದ್ದಂತೆಯೇ ದೇಶದ ಶಾಂತಿ ಮತ್ತು ಅಭಿವೃದ್ಧಿ ಮಂಡಳಿಯನ್ನು ಬರ್ಖಾಸ್ತುಗೊಳಿಸಿ, ಹೊಸ ಸಚಿವ ಸಂಪುಟವನ್ನು ಘೋಷಣೆ ಮಾಡಲಾಯಿತು ಎಂದು ಸರ್ಕಾರಿ ಸ್ವಾಮ್ಯದ ಸುದ್ದಿವಾಹಿನಿ ತಿಳಿಸಿದೆ.

ಈ ಬೆಳವಣಿಗೆಯ ನಡುವೆಯೂ ಅಧಿಕಾರದ ತೆರೆಯಮರೆಯಲ್ಲಿ ಸೇನಾಧಿಕಾರಿ ಥಾನ್‌ಶ್ವೆ ಅವರ ಹಿಡಿತ ಮುಂದುವರಿಯಲಿದೆ ಎಂದು ಹೇಳಲಾಗಿದೆ. 20 ವರ್ಷಗಳಲ್ಲೇ ಮೊದಲ ಬಾರಿಗೆ ಕಳೆದ ನವೆಂಬರ್‌ನಲ್ಲಿ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದಿತ್ತು. ಪ್ರಜಾಪ್ರಭುತ್ವ ಪರ ಹೋರಾಟಗಾರ್ತಿ ಆಂಗ್ ಸಾನ್ ಸೂಕಿ ಅವರನ್ನು ಹೊರಗಿಟ್ಟು ನಡೆದಿದ್ದ ಈ ಚುನಾವಣೆಯಲ್ಲಿ ಸಾಕಷ್ಟು ಅಕ್ರಮದ ಆರೋಪಗಳು ಕೇಳಿಬಂದಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.