
ಪ್ರಜಾವಾಣಿ ವಾರ್ತೆನ್ಯೂಯಾರ್ಕ್ (ಪಿಟಿಐ): ಇಂಟರ್‌ನೆಟ್ ದೈತ್ಯ ಕಂಪೆನಿ ಯಾಹೂ, 1000 ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕುವ ಸಾಧ್ಯತೆ ಇದೆ. ಕಂಪೆನಿಯ ಕಾರ್ಯನಿರ್ವಹಣೆಗೆ ಹೊಸರೂಪ ನೀಡುವ ಪ್ರಯತ್ನದ ಭಾಗವಾಗಿ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಹೇಳಲಾಗಿದೆ.
ಕಂಪೆನಿಯ ಸಂಶೋಧನಾ ವಿಭಾಗದಲ್ಲಿ ಭಾರಿ ಪ್ರಮಾಣದಲ್ಲಿ ಉದ್ಯೋಗಗಳು ಕಡಿತಗೊಳ್ಳುವ ಸಂಭವವಿದೆ. ಯಾಹೂ ಲಾಬ್ಸ್‌ನ ಮುಖ್ಯಸ್ಥರಾಗಿರುವ ಭಾರತೀಯ ಮೂಲದ ಪ್ರಭಾಕರ್ ರಾಘವನ್ ಕೂಡ ಹುದ್ದೆ ತೊರೆಯುವ ಸಾಧ್ಯತೆ ಇದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ವರದಿ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.