ಇಸ್ಲಾಮಾಬಾದ್ (ಐಎಎನ್‌ಎಸ್): ತನ್ನ ಬಳಿ ಕೆಲಸ ಮಾಡುತ್ತಿದ್ದ ಕಾರ್ಮಿಕನ ಮಗಳು ಮದುವೆಯ ಪ್ರಸ್ತಾಪವನ್ನು ತಿರಸ್ಕರಿಸಿದಳು ಎಂಬ ಕಾರಣಕ್ಕೆ ಇಲ್ಲಿನ ಪ್ರಭಾವಿ ಭೂಮಾಲೀಕ ಕುಟುಂಬದವರು ಆಕೆಯ ಮೂಗನ್ನೇ ಕತ್ತರಿಸಿದ ಘಟನೆ ಪಂಜಾಬ್ ಪ್ರಾಂತ್ಯದಲ್ಲಿ ನಡೆದಿದೆ.
ಫರೀದಾ ಬೀಬಿ (20) ಎಂಬ ಯುವತಿಯ ತಂದೆ ಪಂಜಾಬ್ ಪ್ರಾಂತ್ಯದ ಬಸ್ತಿ ಶೇರ್‌ವಾಲಿಯಲ್ಲಿ ಜಮ್‌ಶೆಡ್ ಮತ್ತು ನದೀಮ್ ಎಂಬುವವರ ಬಳಿ ಕೆಲಸ ಮಾಡುತ್ತಿದ್ದರು.
ಜಮ್‌ಶೆಡ್ ಅವರ ಪುತ್ರ ಫರೀದಾರನ್ನು ಪದೇ ಪದೇ ಮದುವೆಯಾಗುವಂತೆ ಪೀಡಿಸುತ್ತಿದ್ದ. ಇದಕ್ಕೆ ಫರೀದಾ ಒಪ್ಪಿಗೆ ನೀಡಲಿಲ್ಲ. ಇದರಿಂದ ರೊಚ್ಚಿಗೆದ್ದ ಜಮ್‌ಶೆಡ್, ನದೀಮ್ ಮತ್ತು ಇತರೆ ಐವರು ಆಕೆಯ ಮನೆಯೊಳಗೆ ನುಗ್ಗಿ, ಚಿತ್ರಹಿಂಸೆ ನೀಡಿ ಮೂಗನ್ನು ಕತ್ತರಿಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆಯೂ ಆಕೆಯ ಅಪಹರಣಕ್ಕೆ ಆರೋಪಿಗಳು ಯತ್ನಿಸಿ ವಿಫಲರಾಗಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.