ಸನಾ (ಐಎಎನ್‌ಎಸ್): ಯೆಮನ್‌ನ ಬಂದರು ಪಟ್ಟಣ ಏಡನ್‌ನಲ್ಲಿ ಭಾನುವಾರ ಸೇನೆ ಮತ್ತು ಅಲ್ ಖೈದಾ ಉಗ್ರರ ನಡುವೆ ನಡೆದ ಚಕಮಕಿಯಲ್ಲಿ ಆರು ಮಂದಿ ಅಲ್ ಖೈದಾ ಉಗ್ರರು ಸೇರಿದಂತೆ ಕನಿಷ್ಠ 11 ಮಂದಿ ಮೃತಪಟ್ಟಿದ್ದು 35 ಮಂದಿ ಗಾಯಗೊಂಡಿದ್ದಾರೆ ಎಂದು ಕ್ಸಿನ್‌ಹುವಾ ಸೋಮವಾರ ವರದಿ ಮಾಡಿದೆ.
`ಮೂವರು ಸೈನಿಕರು, 6 ಮಂದಿ ಅಲ್ ಖೈದಾ ಉಗ್ರರು ಮತ್ತು ಇಬ್ಬರು ದಾರಿಹೋಕರು ಏಡನ್‌ನ ಪೂರ್ವ ಪ್ರವೇಶ ದ್ವಾರದಲ್ಲಿ ಗುಂಡಿನ ಚಕಮಕಿಯಲ್ಲಿ ಮೃತಪಟ್ಟಿದ್ದು 15 ಮಂದಿ ಯೋಧರು ಮತ್ತು ಸುಮಾರು 20 ಮಂದಿ ಅಲ್ ಖೈದಾ ಉಗ್ರರು ಗಾಯಗೊಂಡಿದ್ದಾರೆ~ ಸೇನಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.