ADVERTISEMENT

ರಕ್ಷಣೆ: ಭಾರತದೊಂದಿಗೆ ಬಾಂಧವ್ಯ ವೃದ್ಧಿಗೆ ಒಪ್ಪಿಗೆ ಸೂಚಿಸಿದ ಅಮೆರಿಕ

ಪಿಟಿಐ
Published 15 ಜುಲೈ 2017, 20:19 IST
Last Updated 15 ಜುಲೈ 2017, 20:19 IST
ರಕ್ಷಣೆ: ಭಾರತದೊಂದಿಗೆ ಬಾಂಧವ್ಯ ವೃದ್ಧಿಗೆ ಒಪ್ಪಿಗೆ ಸೂಚಿಸಿದ ಅಮೆರಿಕ
ರಕ್ಷಣೆ: ಭಾರತದೊಂದಿಗೆ ಬಾಂಧವ್ಯ ವೃದ್ಧಿಗೆ ಒಪ್ಪಿಗೆ ಸೂಚಿಸಿದ ಅಮೆರಿಕ   

ವಾಷಿಂಗ್ಟನ್‌ :  ರಕ್ಷಣಾ ಕ್ಷೇತ್ರದಲ್ಲಿ ಪ್ರಮುಖ ಪಾಲುದಾರ ರಾಷ್ಟ್ರವಾಗಿರುವ ಭಾರತದೊಂದಿಗೆ ಇನ್ನಷ್ಟು ಬಾಂಧವ್ಯ ವೃದ್ಧಿಸಿಕೊಳ್ಳಲು  ಅಮೆರಿಕ ಸಮ್ಮತಿಸಿದೆ.
2018ರ ಆರ್ಥಿಕ ವರ್ಷದಲ್ಲಿ ರಕ್ಷಣೆಗಾಗಿ  ₹39.94 ಲಕ್ಷ ಕೋಟಿ ಮೀಸಲಿರಿಸುವ ನಿರ್ಣಯವನ್ನು  ಅಮೆರಿಕದ ಜನಪ್ರತಿನಿಧಿಗಳ ಸಭೆ ಶುಕ್ರವಾರ ಅಂಗೀಕರಿಸಿದೆ.
ರಾಷ್ಟ್ರೀಯ ರಕ್ಷಣಾ ಕಾಯ್ದೆ (ಎನ್‌ಡಿಎಎ) 2018ಕ್ಕೆ   ತಿದ್ದುಪಡಿ ತರುವ ಸಂಬಂಧ ಭಾರತೀಯ ಮೂಲದ ಸಂಸದೆ ಅಮಿ ಬೆರಾ ಅವರು ಮಂಡಿಸಿದ ನಿರ್ಣಯಕ್ಕೆ ಸದನ ಒಪ್ಪಿಗೆ ಸೂಚಿಸಿತು. ಪರವಾಗಿ 344 ಮತಗಳು ಮತ್ತು ವಿರುದ್ಧವಾಗಿ 81 ಮತ ಚಲಾವಣೆಯಾಗಿದ್ದು, ಈ ವರ್ಷದ ಅಕ್ಟೋಬರ್‌್ 1ರಿಂದ ಕಾಯ್ದೆ  ಜಾರಿಗೆ ಬರಲಿದೆ.

ಪಾಕ್‌ಗೆ  ನೆರವು: ಅಮೆರಿಕ ಷರತ್ತು

ವಾಷಿಂಗ್ಟನ್‌: ಪಾಕಿಸ್ತಾನಕ್ಕೆ ರಕ್ಷಣಾ ಕ್ಷೇತ್ರದಲ್ಲಿ ಆರ್ಥಿಕ ನೆರವು ನೀಡಲು ಕಠಿಣ ಷರತ್ತುಗಳನ್ನು ವಿಧಿಸುವ ಸಂಬಂಧ  ಮೂರು  ತಿದ್ದುಪಡಿಗಳನ್ನು ತರಲಾಗಿದೆ.

ADVERTISEMENT

ಈ ಷರತ್ತುಗಳು ಪಾಕಿಸ್ತಾನವು ಭಯೋತ್ಪಾದಕರು ಮತ್ತು ಭಯೋತ್ಪಾದಕ ಸಂಘಟನೆಗಳಿಗೆ ನೀಡುವ ಬೆಂಬಲಕ್ಕೆ ಸಂಬಂಧಿಸಿದ್ದಾಗಿದೆ.
ಭಯೋತ್ಪಾದನೆ ವಿರುದ್ಧದ ಹೋರಾಟದಲ್ಲಿ ಪಾಕಿಸ್ತಾನ ನಿರೀಕ್ಷಿತ ಮಟ್ಟದಲ್ಲಿ ಪ್ರಗತಿ ಸಾಧಿಸಿರುವುದನ್ನು ಸಾಬೀತುಪಡಿಸಬೇಕು ಎಂದು ಷರತ್ತು ವಿಧಿಸಲಾಗಿದೆ.

ರಕ್ಷಣೆ ಅಥವಾ ಇತರೆ ಉದ್ದೇಶಕ್ಕೆ ನೀಡುವ ಅನುದಾನವನ್ನು ರಾಜಕೀಯ ಅಥವಾ ಧಾರ್ಮಿಕ ಸ್ವಾತಂತ್ರ್ಯ ಕೇಳುತ್ತಿರುವ ಅಲ್ಪಸಂಖ್ಯಾತ ಗುಂಪುಗಳಿಗಾಗಿ ಬಳಸುತ್ತಿಲ್ಲ ಎನ್ನುವುದನ್ನು ರಕ್ಷಣಾ ಕಾರ್ಯದರ್ಶಿ ದೃಢಪಡಿಸಿಕೊಳ್ಳುವುದು ಅವಶ್ಯ ಎಂದು ಷರತ್ತು ವಿಧಿಸಲಾಗಿದೆ.

ಉಗ್ರ ಒಸಾಮಾ ಬಿನ್‌ ಲಾಡೆನ್‌ನನ್ನು ಪತ್ತೆ ಮಾಡುವಲ್ಲಿ ನೆರವಾದ ಡಾ. ಶಕೀಲ್‌ ಅಫ್ರಿದಿ ಅವರನ್ನು ಅಂತರರಾಷ್ಟ್ರೀಯ ಮಟ್ಟದ ನಾಯಕ ಎಂದು ಗುರುತಿಸಿ ಜೈಲಿನಿಂದ ಬಿಡುಗಡೆ ಮಾಡಬೇಕು ಎನ್ನುವ ಷರತ್ತನ್ನೂ ಹಾಕಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.