ಮಾಸ್ಕೊ: ಬಹುಕೋಟಿ ಮೌಲ್ಯದ ದೂರಗಾಮಿ ವಾಯು ರಕ್ಷಣಾ ಕ್ಷಿಪಣಿ ವ್ಯವಸ್ಥೆಯ ‘ಎಸ್–400 ಟ್ರಿಯಂಫ್’ ಖರೀದಿ ಒಪ್ಪಂದಕ್ಕೆ ರಷ್ಯಾದ ಜತೆ ಭಾರತವು ಶನಿವಾರ ಸಹಿ ಹಾಕಲಿದೆ.
ಗೋವಾದಲ್ಲಿ ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಸಹಿ ಹಾಕಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
ಒಪ್ಪಂದ ಅಂತಿಮಗೊಂಡರೆ ಭಾರತವು ಚೀನಾ ಬಳಿಕ ಈ ರಕ್ಷಣಾ ಖರೀದಿ ವ್ಯವಹಾರಕ್ಕೆ ಸಹಿ ಹಾಕಿದ ಎರಡನೇ ದೇಶವಾಗಲಿದೆ. ಒಂದೇ ಸಮಯದಲ್ಲಿ 36 ಕಡೆ ಗುರಿ ಇಡುವ ಸಾಮರ್ಥ್ಯವನ್ನು ಇದು ಹೊಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.