ಇಸ್ಲಾಮಾಬಾದ್: ‘ದೇಶಭ್ರಷ್ಟರಾಗಿ ಸೌದಿ ಅರೇಬಿಯಾದಲ್ಲಿದ್ದ ಪಾಕಿಸ್ತಾನದ ಮಾಜಿ ಸರ್ವಾಧಿಕಾರಿ ಪರ್ವೇಜ್ ಮುಷರಫ್ ಅವರು 2008ರಲ್ಲಿ ಜಂಟಿ ಸರ್ಕಾರ ರಚನೆಗೆ ‘ರಹಸ್ಯ ಒಪ್ಪಂದ’ ಮಾಡಿಕೊಳ್ಳಲು ನನ್ನನ್ನು ಆಹ್ವಾನಿಸಿದ್ದರು’ ಎಂದು ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್ ಹೇಳಿದ್ದಾರೆ.
ಪಿಎಲ್‌ಎಮ್–ಎನ್‌ನ (ಪಾಕಿಸ್ತಾನ ಮುಸ್ಲಿಮ್ ಲೀಗ್–ನವಾಜ್) ಸಂಸದೀಯ ಸಮಿತಿ ಸಭೆಯಲ್ಲಿ ಅವರು ಈ ವಿಷಯ ಪ್ರಸ್ತಾಪಿಸಿದ್ದಾರೆ.