ADVERTISEMENT

ರಾಜಕೀಯಕ್ಕೆ ಬಿಲಾವಲ್

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ಇಸ್ಲಾಮಾಬಾದ್ (ಪಿಟಿಐ): ಹತ್ಯೆಗೀಡಾದ ಪಾಕಿಸ್ತಾನದ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಪುತ್ರ 24 ವರ್ಷದ ಬಿಲಾವಲ್ ಭುಟ್ಟೊ, ತನ್ನ ತಾಯಿಯ 5ನೇ ಪುಣ್ಯತಿಥಿಯಂದು ರಾಷ್ಟ್ರದ ರಾಜಕೀಯಕ್ಕೆ ಅಧಿಕೃತವಾಗಿ  ದುಮುಕಿದರು.

ಸರ್ವಾಧಿಕಾರಿಗಳು ಮತ್ತು ಉಗ್ರರ ಕಪಿಮುಷ್ಟಿಯಿಂದ ರಾಷ್ಟ್ರವನ್ನು ಸಂರಕ್ಷಿಸುವ ಪ್ರತಿಜ್ಞೆಯನ್ನು ಅವರು ಮಾಡಿದರು. ಇದೇ ವೇಳೆ ಬಿಲಾವಲ್‌ಅವರು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರ ವಿರುದ್ಧವೂ ಅಸಮಾಧಾನ ಹೊರಗೆಡವಿದರು.

ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ ಅಧ್ಯಕ್ಷರಾಗಿರುವ ಬಿಲಾವಾಲ್‌ಗೆ ಮುಂದಿನ ಸೆಪ್ಟೆಂಬರ್‌ಗೆ 25 ವರ್ಷ ತುಂಬಲಿದ್ದು, ನಂತರ ಚುನಾವಣೆಗೆ ಸ್ಪರ್ಧಿಸಲು ಅರ್ಹರಾಗಲಿದ್ದಾರೆ. ಮುಂದಿನ ಚುನಾವಣೆಯಲ್ಲಿ ಪಿಪಿಪಿ ಸಾರಥ್ಯವನ್ನು ಅವರೇ ವಹಿಸುವ ನಿರೀಕ್ಷೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT