ADVERTISEMENT

ರಾಜತಾಂತ್ರಿಕ ಹುದ್ದೆಗೆ ಭಾರತೀಯನ ನೇಮಕ

​ಪ್ರಜಾವಾಣಿ ವಾರ್ತೆ
Published 11 ಸೆಪ್ಟೆಂಬರ್ 2013, 19:59 IST
Last Updated 11 ಸೆಪ್ಟೆಂಬರ್ 2013, 19:59 IST

ವಾಷಿಂಗ್ಟನ್‌ (ಪಿಟಿಐ): ಅಮೆರಿಕದ ರಾಜಕೀಯ– ಸೇನಾ ವ್ಯವಹಾರಗಳ ಸಹಾಯಕ ಕಾರ್ಯದರ್ಶಿ  ಹುದ್ದೆಗೆ ಭಾರತೀಯ ಮೂಲದ ಪುನೀತ್‌ ತಲ್ವಾರ್‌ ಅವರನ್ನು ಅಧ್ಯಕ್ಷ ಬರಾಕ್‌ ಒಬಾಮ ನೇಮಿಸಿದ್ದಾರೆ. ತಲ್ವಾರ್‌ ಅವರು ಒಬಾಮ ಅವರ ಮುಖ್ಯ ಸಲಹೆಗಾರರಲ್ಲಿ ಒಬ್ಬರಾಗಿ ಕಳೆದ ನಾಲ್ಕು ವರುಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅಮೆರಿಕದ ಉನ್ನತ ಹುದ್ದೆಗೆ ನೇಮಕವಾಗಿರುವ ಎರಡನೇ ಹೆಸರು ಪುನೀತ್‌ ಅವರದ್ದಾಗಿದೆ. ಜುಲೈ ತಿಂಗಳಲ್ಲಿ ಅಮೆರಿಕದ ದಕ್ಷಿಣ–ಮಧ್ಯ ಏಷ್ಯಾದ ಸಹಾಯಕ ಕಾರ್ಯದರ್ಶಿ ಹುದ್ದೆಗೆ ಭಾರತೀಯ ಮೂಲದ ನಿಶಾ ದೇಸಾಯಿ ಬಿಸ್ವಾಲ್‌ ಅವರನ್ನು ಒಬಾಮ ನೇಮಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.