ADVERTISEMENT

ರಾಯಭಾರ ಕಚೇರಿಗಳಿಗೆ ರಕ್ಷಣೆ ನೀಡುವುದು ಕಡ್ಡಾಯ: ಚೀನಾ

ಪಿಟಿಐ
Published 23 ಅಕ್ಟೋಬರ್ 2017, 19:30 IST
Last Updated 23 ಅಕ್ಟೋಬರ್ 2017, 19:30 IST

ಬೀಜಿಂಗ್: ತನ್ನ ದೇಶದ ರಾಯಭಾರ ಕಚೇರಿಗಳು ಹಾಗೂ ರಾಜತಾಂತ್ರಿಕ ಅಧಿಕಾರಿಗಳಿಗೆ ಕಡ್ಡಾಯವಾಗಿ ರಕ್ಷಣೆ ನೀಡಬೇಕು ಎಂದು ಚೀನಾ ಹೇಳಿದೆ.

ಆದರೆ ಪಾಕಿಸ್ತಾನದಲ್ಲಿರುವ ಚೀನಾ ರಾಯಭಾರಿ ಯಾವೊ ಜಿಂಗ್ ಅವರಿಗೆ ಪೂರ್ವ ತರ್ಕಿಸ್ತಾನ ಇಸ್ಲಾಮಿಕ್ ಚಳವಳಿಯ (ಇಟಿಐಎಂ) ಭಯೋತ್ಪಾದಕ ಸಂಘಟನೆಯಿಂದ ಬಂದಿರುವ ಬೆದರಿಕೆ ಕುರಿತು ಪಾಕಿಸ್ತಾನಕ್ಕೆ ನೀಡಿರುವ ದೂರಿನ ಕುರಿತು ಪ್ರತಿಕ್ರಿಯಿಸಲು ಚೀನಾ ನಿರಾಕರಿಸಿದೆ.

ಜಿಂಗ್‌ ಅವರನ್ನು ಹತ್ಯೆ ಮಾಡಲು ಇಟಿಐಎಂ ಸದಸ್ಯ ಪಾಕಿಸ್ತಾನಕ್ಕೆ ನುಸುಳಿದ್ದಾನೆ. ಆದ್ದರಿಂದ ಜಿಂಗ್‌ ಅವರ ಭದ್ರತೆ ಹೆಚ್ಚಿಸಬೇಕು ಎಂದು ಪಾಕಿಸ್ತಾನದ ಆಂತರಿಕ ಸಚಿವಾಲಯಕ್ಕೆ ಅ.19ರಂದು ಚೀನಾದ ರಾಯಭಾರ ಕಚೇರಿ ಮನವಿ ಮಾಡಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.