ವಾಷಿಂಗ್ಟನ್ (ಪಿಟಿಐ): ರಿಪಬ್ಲಿಕನ್ ಪಕ್ಷದ ಫ್ಲಾರಿಡಾ ಘಟಕದ ಹಣಕಾಸು ಸಮಿತಿಯ ಅಧ್ಯಕ್ಷರ ಹುದ್ದೆಗೆ ಭಾರತೀಯ ಮೂಲದ ಅಕ್ಷಯ್ ದೇಸಾಯಿ ಅವರನ್ನು ನೇಮಿಸಲಾಗಿದೆ.
`ಇದು ಚುನಾವಣಾ ವರ್ಷವಾಗಿರುವುದರಿಂದ ನಮಗೆ ಸಂಪನ್ಮೂಲದ ಅಗತ್ಯವಿದೆ. ನಮ್ಮ ಪಕ್ಷಕ್ಕೆ ಹಾಗೂ ದೇಶಕ್ಕೆ ಅವರು ಸಲ್ಲಿಸಿದ ಸೇವೆಯನ್ನು ಗಮನದಲ್ಲಿಟ್ಟುಕೊಂಡು ಈ ನೇಮಕ ಮಾಡಲಾಗಿದೆ~ ಎಂದು ರಿಪಬ್ಲಿಕನ್ ಪಕ್ಷದ ಫ್ಲಾರಿಡಾ ಘಟಕದ ಅಧ್ಯಕ್ಷರಾದ ಲೆನ್ನಿ ಕರ್ರಿ ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.