ADVERTISEMENT

ರೋಹಿಂಗ್ಯಾ ಮುಸ್ಲಿಮರನ್ನು ರಕ್ಷಿಸಿ: ಮಲಾಲಾ ಮನವಿ

ಸುದ್ದಿ 2 ನಿಮಿಷ

​ಪ್ರಜಾವಾಣಿ ವಾರ್ತೆ
Published 8 ಜೂನ್ 2015, 19:30 IST
Last Updated 8 ಜೂನ್ 2015, 19:30 IST
ಮಲಾಲಾ ಯೂಸುಫ್‌ಝೈ,  ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ
ಮಲಾಲಾ ಯೂಸುಫ್‌ಝೈ, ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ   

ಲಂಡನ್‌ (ಎಎಫ್‌ಪಿ): ರೋಹಿಂಗ್ಯಾ ಮುಸ್ಲಿಮರು ಎದುರಿಸುತ್ತಿರುವ ಕಿರು ಕುಳವನ್ನು ತಡೆಯಲು ಮ್ಯಾನ್ಮಾರ್‌ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ನೊಬೆಲ್‌ ಪ್ರಶಸ್ತಿ ಪುರಸ್ಕೃತ ಮಕ್ಕಳ ಹಕ್ಕುಗಳ ಹೋರಾಟಗಾರ್ತಿ ಮಲಾಲಾ ಯೂಸುಫ್‌ಝೈ ಹೇಳಿದ್ದಾರೆ.

ರೋಹಿಂಗ್ಯಾ ಮುಸ್ಲಿಮರನ್ನು ಅಲ್ಲಿನ ಸರ್ಕಾರ ಅಕ್ರಮ ವಲಸಿಗರು ಎಂದು ಪರಿಗಣಿಸುತ್ತದೆ. ರೋಹಿಂಗ್ಯಾ ಮುಸ್ಲಿಮರಿಗೆ ಸಮಾನ ಹಕ್ಕುಗಳು ಮತ್ತು ಅವಕಾಶಗಳನ್ನು ನೀಡಬೇಕು. ಅವರನ್ನು ದೇಶದ ಮುಖ್ಯವಾಹಿನಿಗೆ ಸೇರಿಸಿಕೊಳ್ಳಬೇಕು ಎಂದು ಮಲಾಲಾ ಕರೆ ನೀಡಿದ್ದಾರೆ.

ರೋಹಿಂಗ್ಯಾ ಮುಸ್ಲಿಮರು ಹುಟ್ಟಿದ ಮತ್ತು ತಲೆಮಾರುಗಳಿಂದ ನೆಲೆಸಿರುವ ದೇಶದಲ್ಲಿ ಅವರಿಗೆ ಪೌರತ್ವ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ. 13 ಲಕ್ಷದಷ್ಟಿರುವ ರೋಹಿಂಗ್ಯಾ ಮುಸ್ಲಿಮರಿಗೆ ಯಾವುದೇ ದೇಶದ ಪೌರತ್ವ ಇಲ್ಲ. 2012ರಲ್ಲಿ ಮ್ಯಾನ್ಮಾರ್‌ನಲ್ಲಿ ನಡೆದ ಭೀಕರ ಕೋಮುಗಲಭೆಯ ನಂತರ ಸಾವಿರಾರು ಜನರು ಅಲ್ಲಿಂದ ಪಲಾಯನ ಮಾಡಿದ್ದರು. ಅದು ದೊಡ್ಡ ವಲಸೆ ಸಮಸ್ಯೆಗೆ ಕಾರಣವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.