ADVERTISEMENT

ಲಂಡನ್‌ನಲ್ಲಿ ಉಗ್ರರ ಕೃತ್ಯಕ್ಕೆ 7 ಮಂದಿ ಬಲಿ

ಏಜೆನ್ಸೀಸ್
Published 4 ಜೂನ್ 2017, 8:57 IST
Last Updated 4 ಜೂನ್ 2017, 8:57 IST
ಲಂಡನ್‌ನಲ್ಲಿ ಉಗ್ರರ ಕೃತ್ಯಕ್ಕೆ 7 ಮಂದಿ ಬಲಿ
ಲಂಡನ್‌ನಲ್ಲಿ ಉಗ್ರರ ಕೃತ್ಯಕ್ಕೆ 7 ಮಂದಿ ಬಲಿ   

ಲಂಡನ್‌: ಲಂಡನ್‌ ನಗರದಲ್ಲಿ ಉಗ್ರರು ನಡೆಸಿರುವ ಅಟ್ಟಹಾಸಕ್ಕೆ 7 ಮಂದಿ ಮೃತಪಟ್ಟಿದ್ದಾರೆ. ಘಟನೆಯಲ್ಲಿ 50ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಮೂರು ಕಡೆಗಳಲ್ಲಿ ಶನಿವಾರ ರಾತ್ರಿ ಉಗ್ರರು ದಾಳಿ ನಡೆಸಿದ್ದಾರೆ. ದಾಳಿ ನಡೆಸಿದ ಮೂವರೂ ಉಗ್ರರನ್ನು ಪೊಲೀಸರು ಗುಂಡಿಕ್ಕಿ ಕೊಂದಿದ್ದಾರೆ.

ಉಗ್ರರು ಲಂಡನ್‌ ಬ್ರಿಜ್‌ನಲ್ಲಿ ಪಾದಾಚಾರಿಗಳ ಮೇಲೆ ವ್ಯಾನ್‌ ನುಗ್ಗಿಸಿದ್ದಾರೆ. ಬರೊ ಮಾರ್ಕೆಟ್‌ನಲ್ಲಿ ಸಿಕ್ಕ ಸಿಕ್ಕವರಿಗೆ ಚಾಕುವಿನಿಂದ ಇರಿದಿದ್ದಾರೆ.

ADVERTISEMENT

ಬಹುತೇಕ ಗಾಯಾಳುಗಳ ಸ್ಥಿತಿ ಗಂಭೀರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಇದೆ. ಲಂಡನ್‌ ನಗರದಾದ್ಯಂತ ಹೈಅಲರ್ಟ್‌ ಘೋಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.