
ಪ್ರಜಾವಾಣಿ ವಾರ್ತೆಇಸ್ಲಾಮಾಬಾದ್ (ಪಿಟಿಐ): ಅಮೆರಿಕದ ಪಡೆಗಳಿಂದ 11 ತಿಂಗಳ ಹಿಂದೆ ಹತ್ಯೆಗೀಡಾದ ಉಗ್ರ ಒಸಾಮ ಬಿನ್ ಲಾಡೆನ್ ಕುಟುಂಬದವರನ್ನು ಬುಧವಾರ ಪಾಕಿಸ್ತಾನದಿಂದ ಗಡಿಪಾರು ಮಾಡುವ ಸಾಧ್ಯತೆಗಳಿವೆ.
ಅಕ್ರಮವಾಗಿ ರಾಷ್ಟ್ರಕ್ಕೆ ಪ್ರವೇಶಿಸಿ, ನೆಲೆಸಿದ್ದ ತಪ್ಪಿಗಾಗಿ ಪಾಕ್ ನ್ಯಾಯಾಲಯವು ಲಾಡೆನ್‌ನ ಮೂವರು ಪತ್ನಿಯರು ಹಾಗೂ 13 ಮಕ್ಕಳನ್ನು 45 ದಿನಗಳ ಕಾಲ ಪೊಲೀಸ್ ವಶಕ್ಕೆ ಒಪ್ಪಿಸಿತ್ತು. ಇದೇ ವೇಳೆ ನ್ಯಾಯಾಲಯ ಅವರನ್ನು ಶೀಘ್ರವೇ ರಾಷ್ಟ್ರದಿಂದ ಗಡಿಪಾರು ಮಾಡುವಂತೆಯೂ ಆದೇಶಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.