ADVERTISEMENT

ಲಾಡೆನ್ ಹತ್ಯೆಗೆ ನೆರವು: ವೈದ್ಯ ಅಫ್ರಿದಿ ಖಾತೆ ಮುಟ್ಟುಗೋಲು

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2012, 19:30 IST
Last Updated 25 ಫೆಬ್ರುವರಿ 2012, 19:30 IST

ಇಸ್ಲಾಮಾಬಾದ್ (ಐಎಎನ್‌ಎಸ್): ತಾಲಿಬಾನ್ ಉಗ್ರ ಒಸಾಮಾ ಬಿನ್ ಲಾಡೆನ್ ಕುರಿತ ಅಮೆರಿಕದ ಬೇಹುಗಾರಿಕಾ ಸಂಸ್ಥೆ ಸಿಐಎಗೆ ಮಾಹಿತಿ ನೀಡುತ್ತಿದ್ದ ಎಂಬ ಆರೋಪದ ಮೇಲೆ ಡಾ.ಶಕೀಲ್ ಅಫ್ರಿದಿ ಎಂಬ ವೈದ್ಯನೊಬ್ಬನ ಬ್ಯಾಂಕ್ ಖಾತೆಯನ್ನು ಪಾಕಿಸ್ತಾನ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ.

ಪೋಲಿಯೊ ಪ್ರಚಾರದ ನೆಪದಲ್ಲಿ ಲಾಡೆನ್ ಅಡಗು ತಾಣ ಪತ್ತೆ ಹಚ್ಚಿದ್ದ ಈ ವೈದ್ಯ, ಲಾಡೆನ್ ಹಾಗೂ ಆತನ ಪತ್ನಿಯ ಡಿಎನ್‌ಎ ಪರೀಕ್ಷೆಗೆ ಬೇಕಾದ ಮಾಹಿತಿಯನ್ನು ಸಿಐಎಗೆ ರವಾನಿಸಿದ್ದ.
 
ಈ ಮಾಹಿತಿ ಪಾಕಿಸ್ತಾನ ಸರ್ಕಾರಕ್ಕೆ ತಿಳಿದಿತ್ತು. ಈ ಆರೋಪದ ಮೇಲೆ ಕೆಲವು ದಿನಗಳ ಹಿಂದಷ್ಟೇ ಪೆಶಾವರದ ಹಯತಾಬಾದ್‌ನಲ್ಲಿರುವ ಅಫ್ರಿದಿಯ ಐಷಾರಾಮಿ ಬಂಗಲೆಯನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.