ADVERTISEMENT

ಲಿನೇಶಿಯಾದಲ್ಲೀಗ ಮಹಾತ್ಮ ಗಾಂಧೀಜಿ ಪ್ರತಿಮೆ

​ಪ್ರಜಾವಾಣಿ ವಾರ್ತೆ
Published 15 ಏಪ್ರಿಲ್ 2011, 10:05 IST
Last Updated 15 ಏಪ್ರಿಲ್ 2011, 10:05 IST

ಜೋಹಾನ್ಸ್ ಬರ್ಗ್ (ಪಿಟಿಐ):  ಭಾರತೀಯರೇ ಪ್ರಧಾನವಾಗಿ ನೆಲೆಸಿರುವ  ನಗರದ ದಕ್ಷಿಣ ಪ್ರದೇಶದಲ್ಲಿರುವ ಲಿನೇಶಿಯಾ ಉಪನಗರದಲ್ಲಿ ಇದೇ ಮೊದಲ ಬಾರಿ ಮಹಾತ್ಮ ಗಾಂಧೀಜಿ ಅವರ ಪ್ರತಿಮೆಯನ್ನು  ನಿಲ್ಲಿಸಲಾಗಿದೆ. 

ವರ್ಣಬೇಧ ನೀತಿ ಅನುಸರಿಸಿಕೊಂಡು ಬಂದಿದ್ದ ಸರ್ಕಾರದ ಅರ್ಧ ಶತಮಾನದ ನಂತರವಷ್ಟೇ ಈ ಪ್ರದೇಶದಲ್ಲಿ ಅಭಿವೃದ್ಧಿ ಕಾರ್ಯಗಳನ್ನು  ಕೈಗೊಂಡು ರಾಜಧಾನಿಯಲ್ಲಿದ್ದ ಎಲ್ಲಾ ಭಾರತೀಯರು ಅಲ್ಲಿ ನೆಲೆಸುವಂತೆ ಮಾಡಿತ್ತು. 

ಗಾಂಧಿ ಯುವ ವಕೀಲನಾಗಿದ್ದ ಸಂದರ್ಭದಲ್ಲಿ, ಗಾಂಧಿ  ಮತ್ತು ಅವರ ಅನುಯಾಯಿಗಳು ನೆಲೆಸಿದ್ದ ಟಾಲ್ಟ್ ಟಾಯ್ ತೋಟವೆಂದು ಕರೆಯುವ ಪ್ರದೇಶದಿಂದ ಸುಮಾರು 10 ಕಿ.ಮೀಟರ್ ಗೂ ಕಡಿಮೆ ದೂರದಲ್ಲಿರುವ  ಟ್ರೇಡ್ ರೂಟ್ ಮಾಲ್ ವಾಣಿಜ್ಯ ಸಂಕೀರ್ಣದ ಕಟ್ಟಡದಲ್ಲಿ  ಗಾಂಧೀಜಿ ಅವರ ಪ್ರತಿಮೆಯನ್ನು ಪ್ರತಿಷ್ಠಾಪಿಸಲಾಗಿದೆ.

ADVERTISEMENT

 ಈ ಪ್ರತಿಮೆಯನ್ನು ಭಾರತದ ಅಹಮದಾಬಾದ್ ನಲ್ಲಿರುವ ಕಟ್ಟಾ ಗಾಂಧಿವಾದಿ ಕಾಂತಿಲಾಲ್ ಪಟೇಲ್ ಅವರು ಸಿದ್ಧಪಡಿಸಿದ್ದಾರೆಂದು  ಲಿನೇಶಿಯಾದ ಹೆಸರಾಂತ ಕ್ರೀಡಾಪಟು ಮತ್ತು ಗುಜರಾತಿ ಸಮುದಾಯದ ಕಾರ್ಯಕರ್ತ ಮೋಹನ್ ಹೀರಾ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.