ADVERTISEMENT

ವಲಸೆ ವಿದ್ಯಾರ್ಥಿಗಳ ಕಾಯ್ದೆಗೆ ಅನುಮೋದನೆ

​ಪ್ರಜಾವಾಣಿ ವಾರ್ತೆ
Published 9 ಅಕ್ಟೋಬರ್ 2011, 19:30 IST
Last Updated 9 ಅಕ್ಟೋಬರ್ 2011, 19:30 IST

ಲಾಸ್ ಏಂಜಲೀಸ್ (ಎಎಫ್‌ಪಿ): ವಲಸೆ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂಥ `ಡ್ರೀಮ್ ಆ್ಯಕ್ಟ್~ಗೆ  ಕ್ಯಾಲಿಫೊರ್ನಿಯಾ ಗವರ್ನರ್ ಜೆರಿ ಬ್ರೌನ್ ಸಹಿ ಹಾಕಿದ್ದಾರೆ.

ಇದು ಅಕ್ರಮ ವಲಸಿಗರು ಅಮೆರಿಕದ ವಿಶ್ವವಿದ್ಯಾಲಯ ಹಾಗೂ ಕಾಲೇಜುಗಳಲ್ಲಿ ಪ್ರವೇಶ ಪಡೆಯಲು ಹಣಕಾಸು ನೆರವಿಗೆ ಅನುವು ಮಾಡಿಕೊಡಲಿದೆ ಎಂದು ಬ್ರೌನ್ ಕಚೇರಿ ಮೂಲಗಳು ತಿಳಿಸಿವೆ.

ಕ್ಯಾಲಿಫೊರ್ನಿಯಾದಲ್ಲಿ ಪ್ರೌಢಶಿಕ್ಷಣ ಕಲಿತ ಅಕ್ರಮ ವಲಸಿಗರು ಈ ಕಾಯ್ದೆ ಅಡಿಯಲ್ಲಿ ಕಾಲೇಜು ಶಿಕ್ಷಣದ ನೆರವು ಪಡೆಯಲಿದ್ದಾರೆ. ಕಳೆದ ವರ್ಷ ಸುಮಾರು 3.70 ಲಕ್ಷ ಬಡ ವಿದ್ಯಾರ್ಥಿಗಳು ತಲಾ ಸರಾಸರಿ 4,500 ಡಾಲರ್ ನೆರವು ಪಡೆದಿದ್ದರು.

ನೂತನ ಕಾಯ್ದೆ ಅಡಿಯಲ್ಲಿ ಸುಮಾರು 2,500 ವಿದ್ಯಾರ್ಥಿಗಳು ಕಾಲೇಜು ಶಿಕ್ಷಣದ ನೆರವು ಪಡೆಯಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.