
ಪ್ರಜಾವಾಣಿ ವಾರ್ತೆಲಾಹೋರ್ (ಪಿಟಿಐ): `ಶೀಘ್ರವೇ ವಾಘಾ ಗಡಿಯ ಮೂಲಕ ಎಲ್ಲಾ ವಸ್ತು ಗಳನ್ನು ಆಮದು ಮಾಡಿಕೊಳ್ಳಬಹುದು~ ಎಂದು ಭಾರತೀಯ ಹೈಕಮಿಷನರ್ ಶರತ್ ಸಭರ್‌ವಾಲ್ ತಿಳಿಸಿದ್ದಾರೆ.
ಈ ಬಗ್ಗೆ ಪಾಕಿಸ್ತಾನ ಸರ್ಕಾರ ಭರವಸೆ ನೀಡಿದೆ ಎಂದೂ ಅವರು ಹೇಳಿದ್ದಾರೆ.
ಗುರುವಾರ ಲಾಹೋರ್‌ನಲ್ಲಿ ವಾಣಿಜೋದ್ಯಮಿಗಳು ಹಾಗೂ ಕೈಗಾರಿಕಾ ಮಂಡಳಿ (ಎಲ್‌ಸಿಸಿಐ)ಯನ್ನು ಉದ್ದೇಶಿಸಿ ಮಾತನಾಡಿದ ಅವರು, `ಪ್ರಸ್ತುತ ಕೇವಲ 138 ವಸ್ತುಗಳನ್ನು ಮಾತ್ರ ವಾಘಾ-ಅಟ್ಟಾರಿ ಗಡಿ ಮೂಲಕ ಆಮದು ಮಾಡಿಕೊಳ್ಳಲು ಸಾಧ್ಯವಾಗುತ್ತಿದೆ.
ಶೀಘ್ರವೇ ಈ ನಿರ್ಬಂಧ ಸಡಿಲಗೊಳ್ಳಲಿದೆ~ ಎಂದರು.70 ಕಿ.ಮೀ ಕಿರು ಕೊಳವೆ ಮಾರ್ಗದ ಮೂಲಕ ಪಾಕಿಸ್ತಾನವು ಇನ್ನು ಮುಂದೆ ಭಾರತದಿಂದ ಪೆಟ್ರೋಲಿಯಂ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳಬಹುದಾಗಿದೆ ಎಂದು ಅವರು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.