ADVERTISEMENT

ವಿಕಿರಣ ಸೋರಿಕೆ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2013, 19:59 IST
Last Updated 2 ಸೆಪ್ಟೆಂಬರ್ 2013, 19:59 IST

ಟೋಕಿಯೊ (ಎಪಿ): ಫುಕುಶಿಮಾ ಪರಮಾಣು ಸ್ಥಾವರದ ಘಟಕದಿಂದ ವಿಕಿರಣ ಸೋರಿಕೆ ಉಂಟಾಗಿ ನೀರು ಕಲುಷಿತಗೊಂಡಿರುವುದರಿಂದ ಆತಂಕಕ್ಕೆ ಒಳಗಾಗಿರುವ ಜಪಾನಿನ ಪರಮಾಣು ನಿಯಂತ್ರಣ ಸಂಸ್ಥೆಯು, ತರಾತುರಿಯಲ್ಲಿ ದಾಸ್ತಾನು ತೊಟ್ಟಿಯನ್ನು ನಿರ್ಮಿಸಿರುವುದೇ ಸೋರಿಕೆಗೆ ಕಾರಣ ಎಂದು ಹೇಳಿದೆ.

ದಾಸ್ತಾನು ತೊಟ್ಟಿಗೆ ಸಂಪರ್ಕ ಕಲ್ಪಿಸುವ ಪೈಪ್‌ನಲ್ಲಿ ಕಳೆದ ವಾರ ಸೋರಿಕೆ ಕಂಡುಬಂದಿದೆ.


ಪರಮಾಣು ಘಟಕದ ಬಳಿ ನೀರಿನಲ್ಲಿ ವಿಕಿರಣ ಪ್ರಮಾಣ ಜಾಸ್ತಿ ಕಂಡುಬಂದಿರುವುದರಿಂದ ದಾಸ್ತಾನು ತೊಟ್ಟಿಯಲ್ಲೂ ಸೋರಿಕೆಯಾಗುತ್ತಿರಬಹುದು ಎಂದು ಶಂಕಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT