ADVERTISEMENT

ವಿಕಿಲೀಕ್ಸ್ ನಕ್ಷೆ: ಪಾಕ್ ವ್ಯಾಪ್ತಿಗೆ `ಪಿಒಕೆ'

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2013, 19:59 IST
Last Updated 9 ಏಪ್ರಿಲ್ 2013, 19:59 IST

ವಾಷಿಂಗ್ಟನ್ (ಪಿಟಿಐ): ರಾಜತಾಂತ್ರಿಕ ಮಾಹಿತಿಗಳನ್ನು ಹೊರಗೆಡಹುವುದರಲ್ಲಿ ನಿರತವಾಗಿರುವ ವಿಕಿಲೀಕ್ಸ್ ಸಂಸ್ಥೆಯು ಅಂತರ್ಜಾಲದಲ್ಲಿ ಲಗತ್ತಿಸಿರುವ ಜಾಗತಿಕ ನಕ್ಷೆಯಲ್ಲಿ `ಪಾಕ್ ಆಕ್ರಮಿತ ಕಾಶ್ಮೀರ ಪ್ರದೇಶ'ವನ್ನು (ಪಿಒಕೆ) ಪಾಕಿಸ್ತಾನಕ್ಕೆ ಸೇರಿದ ಪ್ರದೇಶವೆಂದು ತೋರಿಸಿದೆ.

ಅಮೆರಿಕ ರಾಜತಾಂತ್ರಿಕತೆಗೆ ಸಂಬಂಧಿಸಿದ 17 ಲಕ್ಷ ಮಾಹಿತಿಗಳನ್ನು ಅಂತರ್ಜಾಲಕ್ಕೆ ಹಾಕಿರುವ ವಿಕಿಲೀಕ್ಸ್, ಅದಕ್ಕೆ ಪೂರಕವಾಗಿ ಸೋಮವಾರ ಲಗತ್ತಿಸಿರುವ ಪ್ರತಿಸ್ಪಂದನ ನಕ್ಷೆಯಲ್ಲಿ (ಇಂಟರ‌್ಯಾಕ್ಟಿವ್ ಮ್ಯಾಪ್) ಹೀಗೆ ತೋರಿಸಿದೆ.

ಮಾಹಿತಿಗಳ ಶೋಧನೆಯನ್ನು ಸುಲಭ ಹಾಗೂ ಆಸಕ್ತಿದಾಯಕಗೊಳಿಸುವ ಸಲುವಾಗಿ ವಿಕಿಲೀಕ್ಸ್ ಈ ಪ್ರತಿಸ್ಪಂದನ ನಕ್ಷೆಯನ್ನು ಹಾಕಿದೆ. ಪಾಕ್ ಆಕ್ರಮಿತ ಕಾಶ್ಮೀರವನ್ನು ಎರಡು ಭಾಗಗಳಾಗಿ, ಅಂದರೆ, ಗಡಿ ನಿಯಂತ್ರಣ ರೇಖೆಯ (ಎಲ್‌ಒಸಿ) ಒಂದು ಪಾರ್ಶ್ವವನ್ನು  ಭಾರತಕ್ಕೆ ಸೇರಿದ ಪ್ರದೇಶವೆಂದು ಹಾಗೂ ಮತ್ತೊಂದು ಪಾರ್ಶ್ವವನ್ನು ಪಾಕಿಸ್ತಾನಕ್ಕೆ ಸೇರಿದ ಪ್ರದೇಶವೆಂದು ತೋರಿಸುವುದು ಅಂತರರಾಷ್ಟ್ರೀಯ ಮಟ್ಟದಲ್ಲಿ ನಡೆದು ಬಂದಿರುವ ವಾಡಿಕೆ. ಆದರೆ ವಿಕಿಲೀಕ್ಸ್ ಈ ವಾಡಿಕೆಯನ್ನು ಮುರಿದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.