ADVERTISEMENT

ವಿಚಾರಣೆ ಎದುರಿಸಿದ ಷರೀಫ್

ಪಿಟಿಐ
Published 15 ಜೂನ್ 2017, 19:30 IST
Last Updated 15 ಜೂನ್ 2017, 19:30 IST
ವಿಚಾರಣೆ ಎದುರಿಸಿದ ಷರೀಫ್
ವಿಚಾರಣೆ ಎದುರಿಸಿದ ಷರೀಫ್   

ಇಸ್ಲಾಮಾಬಾದ್‌: ‘ಪನಾಮ ಪೇಪರ್ಸ್‌’ ಪ್ರಕರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಪ್ರಧಾನಿ ನವಾಜ್ ಷರೀಫ್‌, ಇಲ್ಲಿನ ಸುಪ್ರೀಂ ಕೋರ್ಟ್‌ ರಚಿಸಿರುವ ಜಂಟಿ ತನಿಖಾ ತಂಡದ (ಜೆಐಟಿ) ಎದುರು ಗುರುವಾರ ವಿಚಾರಣೆಗೆ ಹಾಜರಾದರು.

ಇಂತಹ ಉನ್ನತ ಮಟ್ಟದ ತನಿಖಾ ತಂಡದಿಂದ ಪಾಕಿಸ್ತಾನದ ಪ್ರಧಾನಿಯೊಬ್ಬರು ವಿಚಾರಣೆ ಎದುರಿಸಿದ್ದು ಇದೇ ಮೊದಲು. ಸುಮಾರು ಮೂರು ಗಂಟೆಗಳವರೆಗೆ  ವಿಚಾರಣೆ ನಡೆಯಿತು.

ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಷರೀಫ್‌, ‘ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾಗಿರುವ ಸರ್ಕಾರವನ್ನು ಅಸ್ಥಿರಗೊಳಿಸಲು ಕೆಲ ಕಾಣದ ಕೈಗಳು ಪ್ರಯತ್ನಿಸುತ್ತಿವೆ’ ಎಂದು  ಆರೋಪಿಸಿದರು.

ADVERTISEMENT

‘ಈ ಆರೋಪಗಳು ನಾನು ಪ್ರಧಾನಿ ಅವಧಿ ಪೂರ್ಣಗೊಳಿಸುವುದರ ಮೇಲೆ ಯಾವುದೇ ಪರಿಣಾಮ ಬೀರಲಾರವು ಮತ್ತು ಅವು  ಭ್ರಷ್ಟಾಚಾರದ ಆರೋಪಗಳಲ್ಲ. ನನ್ನ ಕುಟುಂಬದ ವ್ಯವಹಾರಕ್ಕೆ ಸಂಬಂಧಿಸಿದಂತೆ ಮಾಡಿರುವ ವೈಯಕ್ತಿಕ ಆರೋಪಗಳು’ ಎಂದರು. ಷರೀಫ್‌ ಕುಟುಂಬ ಬ್ರಿಟನ್‌ನಲ್ಲಿ ಆಸ್ತಿ ಹೊಂದಿದೆ ಎಂದು ಪನಾಮ ದಾಖಲೆ ಬಹಿರಂಗವಾದಾಗ ತಿಳಿದುಬಂದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.