ADVERTISEMENT

ವಿಜ್ಞಾನಿಗಳಿಂದ ಹೊಸ ನಕ್ಷತ್ರ ಪುಂಜ ಪತ್ತೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 19:40 IST
Last Updated 13 ಡಿಸೆಂಬರ್ 2012, 19:40 IST

ವಾಷಿಂಗ್ಟನ್(ಪಿಟಿಐ): ಮಹಾಸ್ಫೋಟ ಸಂಭವಿಸಿದ ಕೋಟ್ಯಂತರ ವರ್ಷಗಳ ನಂತರ ಬಾಹ್ಯಾಕಾಶದಲ್ಲಿ ಸೃಷ್ಟಿಯಾದ ಏಳು ಹೊಸ ನಕ್ಷತ್ರ ಪುಂಜಗಳನ್ನು ಅಮೆರಿಕದ `ನಾಸಾ' ಖಗೋಳಶಾಸ್ತ್ರಜ್ಞರು ಗುರುತಿಸಿದ್ದಾರೆ.

ಬಾಹ್ಯಾಕಾಶವನ್ನು ಅತ್ಯಂತ ಆಳವಾಗಿ ಗಮನಿಸಿ, ಇಲ್ಲಿಯವರೆವಿಗೆ ಯಾರೂ ಗುರುತಿಸದ ಏಳು ನಕ್ಷತ್ರ ಪುಂಜಗಳನ್ನು ಪತ್ತೆ ಮಾಡಿರುವುದಾಗಿ ವಿಜ್ಞಾನಿಗಳು ಹೇಳಿಕೊಂಡಿದ್ದಾರೆ. ಹದಿಮೂರು ಶತಕೋಟಿ ವರ್ಷಗಳ ಹಿಂದೆ ಸೃಷ್ಟಿಯಾದ ಏಳು ಪ್ರಾಚೀನ ನಕ್ಷತ್ರ ಪುಂಜಗಳನ್ನು ಪತ್ತೆ ಮಾಡಲು ನಾಸಾದ ಹಬ್ಬಲ್ ಬಾಹ್ಯಾಕಾಶ ದೂರದರ್ಶಕವನ್ನು ಬಳಸಿದ್ದಾರೆ.

ನಕ್ಷತ್ರ ಪುಂಜಗಳು ಮೊಟ್ಟ ಮೊದಲು ರೂಪುಗೊಂಡಾಗಿನ ಯುಗ ಹೇಗಿತ್ತು ಎಂಬುದನ್ನು ಈ ಹೊಸ ನಕ್ಷತ್ರ ಪುಂಜಗಳ ಪತ್ತೆಯಿಂದ ತಿಳೀಯಬಹುದಾಗಿದೆ ಎಂದು ನಾಸಾ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.