ADVERTISEMENT

ವಿದೇಶಿ ಸಂಕ್ಷಿಪ್ತ ಸುದ್ದಿಗಳು

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2013, 19:59 IST
Last Updated 24 ಏಪ್ರಿಲ್ 2013, 19:59 IST

ಆಫ್ಘನ್-ಪಾಕ್‌ನಲ್ಲಿ ಮತ್ತೆ ಕಂಪನ
ಕಾಬೂಲ್/ಇಸ್ಲಾಮಾಬಾದ್ (ಪಿಟಿಐ): ಹ
ತ್ತು ದಿನಗಳ ಹಿಂದೆಯಷ್ಟೇ ಭೂಕಂಪನದಿಂದ ತತ್ತರಿಸಿದ್ದ ಆಫ್ಘಾನಿಸ್ತಾನ ಮತ್ತು ಪಾಕಿಸ್ತಾನ ಬುಧವಾರ ಮತ್ತೆ ಲಘುವಾಗಿ ಕಂಪಿಸಿದ್ದು ಅದೃಷ್ಟವಶಾತ್ ಯಾವುದೇ ಸಾವು, ನೋವಿನ ವರದಿಗಳಾಗಿಲ್ಲ.

ರಿಕ್ಟರ್ ಮಾಪಕದಲ್ಲಿ ಭೂಕಂಪನದ ತೀವ್ರತೆ  6.2ರಷ್ಟು ದಾಖಲಾಗಿದ್ದು, ಕೇಂದ್ರ ದಕ್ಷಿಣ ಅಫ್ಘಾನಿಸ್ತಾನದಲ್ಲಿ ಕಂಡುಬಂದಿದೆ. ಆಫ್ಘಾನಿಸ್ತಾನ ಗಡಿಗೆ ಹೊಂದಿಕೊಂಡಿರುವ ಉತ್ತರ ಪಾಕಿಸ್ತಾನದಲ್ಲಿ 10 ಸೆಕೆಂಡು ಕಂಪನದ ತೀವ್ರತೆ ಅನುಭವಕ್ಕೆ ಬಂದಿದೆ.

ವಿಷಲೇಪಿತ ಪತ್ರ: ಆರೋಪ ಕೈಬಿಟ್ಟ ಎಫ್‌ಬಿಐ

ವಾಷಿಂಗ್ಟನ್(ಪಿಟಿಐ): ಆಶ್ಚರ್ಯಕರ ಬೆಳವಣಿಗೆಯೊಂದರಲ್ಲಿ ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮ ಹಾಗೂ ಸೆನೆಟರ್‌ಗೆ ವಿಷಲೇಪಿತ ಪತ್ರ ಕಳುಹಿಸಿದ ಪ್ರಕರಣದಲ್ಲಿ ಆರೋಪಿ ಮೇಲೆ ಹಾಕಲಾಗಿದ್ದ ಎಲ್ಲ ಆರೋಪಗಳನ್ನು ಎಫ್‌ಬಿಐ  ಕೈಬಿಟ್ಟಿದೆ.

ಶ್ವೇತಭವನಕ್ಕೆ ವಿಷಪೂರಿತ ಪತ್ರ ಕಳುಹಿಸಿದ ಆರೋಪದ ಮೇರೆಗೆ ಏ.17ರಂದು ಪೌಲ್ ಕೆವಿನ್ ಕ್ಯೂರಿಟ್ಸ್ ಎಂಬಾತನನ್ನು ಬಂಧಿಸಲಾಗಿತ್ತು.ಆರೋಪಿಯ ಮನೆಯಲ್ಲಿ ವಿಷಕಾರಕ ಅಂಶ ಪತ್ತೆಯಾಗಿಲ್ಲ ಎಂದು ಎಫ್‌ಬಿಐ ಸಿಬ್ಬಂದಿ ನ್ಯಾಯಾಲಯಕ್ಕೆ ತಿಳಿಸಿದ ಮಾರನೇ ದಿನ ಆರೋಪ ಕೈಬಿಟ್ಟಿರುವುದು ಅಚ್ಚರಿಗೆ ಕಾರಣವಾಗಿದೆ.

ವರದಿಗಾರಿಕೆ ನಿಕೃಷ್ಟ ವೃತ್ತಿ!

ನ್ಯೂಯಾರ್ಕ್(ಪಿಟಿಐ): ಉಳಿದ ವೃತ್ತಿಗಳಿಗೆ ಹೋಲಿಸಿದರೆ ವರದಿಗಾರನ ವೃತ್ತಿ ಅತ್ಯಂತ ನಿಕೃಷ್ಟವಾದುದು ಎಂದು ಅಮೆರಿಕದ ಹೊಸ ಸಮೀಕ್ಷೆಯೊಂದು ತಿಳಿಸಿದೆ.

ಅಮೆರಿಕ ಮೂಲದ ಮಾನವ ಸಂಪನ್ಮೂಲ ಸಲಹಾಸಂಸ್ಥೆಯಾದ ಕೆರಿಯರ್ ಕಾಸ್ಟ್ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ಬಹಿರಂಗಗೊಂಡಿದ್ದು, ಇದಕ್ಕೆಂದೇ ಸಂಸ್ಥೆ ಸುಮಾರು 200 ವಿವಿಧ ವೃತ್ತಿಗಳಲ್ಲಿದ್ದವರನ್ನು ಸಮೀಕ್ಷೆಗೊಳಪಡಿಸಿತ್ತು. 2012 ನೇ ಸಾಲಿನಲ್ಲಿ  ನಿಕೃಷ್ಟ ವೃತ್ತಿಗಳ ಸಾಲಿನಲ್ಲಿ ವರದಿಗಾರಿಕೆಯು 5ನೇ ಸ್ಥಾನ ಪಡೆದಿತ್ತು. ಸಾಫ್ಟ್‌ವೇರ್ ಎಂಜಿನಿಯರ್ ಹುದ್ದೆ ಶ್ರೇಷ್ಠ ಸ್ಥಾನ ಪಡೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.