ADVERTISEMENT

ವಿಮಾನಗಳಿಗೆ ಬಡಿದ ಸಿಡಿಲು: ಜನರು ಪಾರು

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2012, 19:30 IST
Last Updated 10 ಮಾರ್ಚ್ 2012, 19:30 IST

ಹ್ಯೂಸ್ಟನ್(ಪಿಟಿಐ): ಹ್ಯೂಸ್ಟನ್ ವಾಯುಪ್ರದೇಶದಲ್ಲಿ ಶುಕ್ರವಾರ ನಾಲ್ಕು ವಿಮಾನಗಳಿಗೆ ಸಿಡಿಲು ಬಡಿದಿದ್ದು, ಅದೃಷ್ಟವಶಾತ್ ಪ್ರಯಾಣಿಕರು ಅಪಾಯವಿಲ್ಲದೆ ಪಾರಾಗಿದ್ದಾರೆ.

ವಿಮಾನ ನಿಲ್ದಾಣದ ಅಧಿಕಾರಿಗಳ ಪ್ರಕಾರ, ಹ್ಯೂಸ್ಟನ್‌ನಿಂದ ಬೊಗೊಟಾ ಕಡೆಗೆ ಹೊರಟಿದ್ದ ವಿಮಾನಕ್ಕೆ ಅಪರಾಹ್ನ ಸಿಡಿಲು ಬಡಿಯಿತು. ವಿಮಾನದಲ್ಲಿ 124 ಪ್ರಯಾಣಿಕರಿದ್ದರು.

 ಸಿಡಿಲು ಬಡಿದ ನಂತರ ವಿಮಾನವನ್ನು ಮರಳಿ ಹ್ಯೂಸ್ಟನ್‌ಗೆ ಕಳುಹಿಸಿ ಸುರಕ್ಷಿತವಾಗಿ ಕೆಳಕ್ಕಿಳಿಸಲಾಯಿತು.
ಅದೇ ದಿನ ಡೆಲ್ಟಾ 1832, ಬೋಯಿಂಗ್ 717 ವಿಮಾನಗಳಿಗೂ ಸಿಡಿಲು ಬಡಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.