ಲಾ ಪಾಜ್ (ಬೊಲಿವಿಯಾ): ಪೂರ್ವ ಬೊಲಿವಿಯಾದ ಸಾಂತಾಕ್ರೂಜ್ ನಗರದಿಂದ ಟ್ರಿನಿಡಾಡ್‌ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನವು ಮಂಗಳವಾರ ಅಪಘಾತಕ್ಕೀಡಾಗಿದ್ದು ಈವರೆವಿಗೂ ಇದರಲ್ಲಿದ್ದ 9 ಪ್ರಯಾಣಿಕರ ಶವಗಳು ಪತ್ತೆಯಾಗಿಲ್ಲ ಎಂದು ಬೊಲಿವಿಯಾದ ವಾಯುಯಾನ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.
ಅಪಘಾತದಲ್ಲಿ ಯಾರೂ ಬದುಕುಳಿದಿಲ್ಲ. ವಿಮಾನದ ಅವಶೇಷಗಳನ್ನು ಟ್ರಿನಿಡಾಡ್ ಬಳಿ ಪತ್ತೆ ಹಚ್ಚಲಾಗಿದೆ ಎಂದು ರಕ್ಷಣಾ ಪಡೆಗಳು ದೃಢಪಡಿಸಿರುವುದಾಗಿ ಬೊಲಿವಿಯಾದ ವಾಯುಯಾನ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.