ಮನಿಲಾ(ಎಎಫ್ಪಿ): ಮನಿಲಾ ಅಂತರರಾಷ್ಟ್ರೀಯ ವಿಮಾನನಿಲ್ದಾಣದ ಪ್ರಯಾಣಿಕರ ಟರ್ಮಿನಲ್ ಹೊರಗೆ ಶುಕ್ರವಾರ ನಡೆದ ದಿಢೀರ್ ದಾಳಿಯಲ್ಲಿ ದಕ್ಷಿಣ ಫಿಲಿಪ್ಪೀನ್್ಸ ಪಟ್ಟಣದ ಮೇಯರ್ ಮತ್ತು ಅವರ ಪತ್ನಿ ಸೇರಿ ನಾಲ್ವರು ಮೃತಪಟ್ಟ ಘಟನೆ ಶುಕ್ರವಾರ ನಡೆದಿದೆ.
‘ಮಿಂದನಾವೊದ ದಕ್ಷಿಣ ಪ್ರಾಂತ್ಯ ದ ಲಬನ್ಗನ್ ಪಟ್ಟಣದ ಮೇಯರ್, ಅವರ ಕುಟುಂಬದವರು ಹಾಗೂ ಅವರ ಭದ್ರತಾ ಸಿಬ್ಬಂದಿಯನ್ನು ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ. ಇದರ ಪರಿಣಾಮ ಮೇಯರ್ ಮತ್ತು ಅವರ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಲ್ಲದೇ, ಘಟನೆಯಲ್ಲಿ ಇತರೆ ಇಬ್ಬರು ಮೃತಪಟ್ಟು, ನಾಲ್ವರು ಗಾಯಗೊಂಡಿದ್ದಾರೆ’ ಎಂದು ಮನಿಲಾ ವಿಮಾನನಿಲ್ದಾಣದ ವ್ಯವಸ್ಥಾಪಕ ಏಂಜಲ್ ಹೊನ್ರಾಡೊ ತಿಳಿಸಿದ್ದಾರೆ.
ಮೃತ ಮೇಯರ್ ಅವರನ್ನು ಉಕೊಲ್ ತಲುಂಪಾ ಎಂದು ಗುರುತಿಸಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.