ADVERTISEMENT

ವಿಯೆಟ್ನಾಂ ಜತೆ ಸಹಕಾರ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 12 ಮೇ 2019, 19:33 IST
Last Updated 12 ಮೇ 2019, 19:33 IST

ಹನೋಯಿ: ರಕ್ಷಣೆ ಮತ್ತು ಭದ್ರತೆ, ಶಾಂತಿ ಉದ್ದೇಶಕ್ಕೆ ಪರಮಾಣು ಶಕ್ತಿ ಬಳಕೆ, ಬಾಹ್ಯಾಕಾಶ ಹಾಗೂ ತೈಲ ಮತ್ತು ಅನಿಲ, ನವೀಕರಿಸಬಹುದಾದ ಇಂಧನ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಸಹಕಾರ ಬಲಪಡಿಸಲು ಭಾರತ ಮತ್ತು ವಿಯೆಟ್ನಾಂ ಮುಂದಾಗಿವೆ.

ಆಗ್ನೇಯ ಏಷ್ಯಾ ದೇಶಗಳ ನಾಲ್ಕು ದಿನಗಳ ಪ್ರವಾಸದಲ್ಲಿದ್ದ ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡು ವಿಯೆಟ್ನಾಂ ಉಪರಾಷ್ಟ್ರಪತಿ ಡಾಂಗ್‌ ಥಿ ಗಾಕ್ ಥಿನ್‌, ಪ್ರಧಾನಿ ಗುಯೆನ್‌ ಕ್ಸಿಯಾನ್‌ ಫುಕ್‌ ಮತ್ತು ನ್ಯಾಷನಲ್‌ ಅಸೆಂಬ್ಲಿಯ ಅಧ್ಯಕ್ಷ ಗುಯೆನ್‌ ಥಿ ಕಿಮ್‌ ಅವರೊಂದಿಗೆ ಮಾತುಕತೆ ನಡೆಸಿದರು.

ವಿಯೆಟ್ನಾಂನ ಮುಖಂಡರ ಜತೆ ನಡೆಸಿದ ಮಾತುಕತೆ ಫಲಪ್ರದವಾಗಿದ್ದು, ದ್ವಿಪಕ್ಷೀಯ ಮತ್ತು ಬಹುಪಕ್ಷೀಯ ಸಹಕಾರ ವೃದ್ಧಿಗೆ ನೆರವಾಗಲಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.