ADVERTISEMENT

ವಿವೇಕಾನಂದ ಪುತ್ಥಳಿ ಅನಾವರಣ

​ಪ್ರಜಾವಾಣಿ ವಾರ್ತೆ
Published 29 ಜನವರಿ 2012, 19:30 IST
Last Updated 29 ಜನವರಿ 2012, 19:30 IST
ವಿವೇಕಾನಂದ ಪುತ್ಥಳಿ ಅನಾವರಣ
ವಿವೇಕಾನಂದ ಪುತ್ಥಳಿ ಅನಾವರಣ   

ಷಿಕಾಗೊ(ಪಿಟಿಐ): ಸ್ವಾಮಿ ವಿವೇಕಾನಂದ ಹಾಗೂ ರವೀಂದ್ರನಾಥ್ ಟ್ಯಾಗೋರ್ ಅವರ 150ನೇ ಜನ್ಮದಿನಾಚರಣೆ ಅಂಗವಾಗಿ ಷಿಕಾಗೊ ಕಲಾ ಸಂಸ್ಥೆಯಲ್ಲಿ ಆಯೋಜಿಸಲಾಗಿರುವ `ಟ್ಯಾಗೋರ್ ಕಲಾಕೃತಿ ಪ್ರದರ್ಶನ~ವನ್ನು ಹಣಕಾಸು ಸಚಿವ ಪ್ರಣವ್ ಮುಖರ್ಜಿ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಅವರು ವಿವೇಕಾನಂದರ ಪುತ್ಥಳಿಯನ್ನು ಸಮರ್ಪಿಸಿದರು.

ವಿವೇಕಾನಂದರು ಅಮೆರಿಕಕ್ಕೆ ಭಾರತದ ಮೊದಲ ಸಾಂಸ್ಕೃತಿಕ ರಾಯಭಾರಿ ಎಂದು ಬಣ್ಣಿಸಿದ ಮುಖರ್ಜಿ, ಭಾರತದಲ್ಲಿರುವ ವಿವಿಧ ಸ್ಮಾರಕಗಳೊಂದಿಗೆ ವಿವೇಕಾನಂದರ ಚಿಂತನೆ ವಿನಿಮಯಕ್ಕೆ ಸಹಕಾರಿಯಾಗುವ ಉದ್ದೇಶದಿಂದ ಷಿಕಾಗೊ ಕಲಾ ಸಂಸ್ಥೆಗೆ 5 ಲಕ್ಷ ಡಾಲರ್ ದೇಣಿಗೆ ನೀಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT