
ಪ್ರಜಾವಾಣಿ ವಾರ್ತೆಲಾಹೋರ್ (ಪಿಟಿಐ): ಸುಮಾರು ಒಂದು ಸಾವಿರಕ್ಕೂ ಹೆಚ್ಚು ಕಾಲೇಜು ಮತ್ತು ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದಲ್ಲಿ 41,685 ಚದರ ಅಡಿ ಚಿತ್ರವನ್ನು ಬಿಡಿಸುವ ಮೂಲಕ ನೂತನ ವಿಶ್ವದಾಖಲೆ ಬರೆದಿದ್ದಾರೆ.
ಲಾಹೋರ್‌ನಲ್ಲಿರುವ ಪಂಜಾಬ್ ಹಾಕಿ ಕ್ರೀಡಾಂಗಣದಲ್ಲಿ ಕೇವಲ ಏಳು ಗಂಟೆಗಳಲ್ಲಿ ಬೃಹತ್ ಚಿತ್ರವನ್ನು ಬಿಡಿಸಿರುವ ವಿದ್ಯಾರ್ಥಿಗಳು, 2010ರಲ್ಲಿ ನೈಜೀರಿಯಾ ಸೃಷ್ಟಿಸಿದ್ದ 33 ಸಾವಿರ ಚದರ ಅಡಿ ಚಿತ್ರದ ದಾಖಲೆ ಅಳಿಸಿ ಹಾಕಿದ್ದಾರೆ ಎಂದು ಪೇಂಟಿಂಗ್ ಕಾರ್ಯಕ್ರಮದ ಆಯೋಜಕರಾದ ಸಲ್ಮಾ ತೌರಬ್ ಆಫ್ ಪರ್ಪಲ್ ಆರ್ಟ್ ಅಂಡ್ ಕಮ್ಯೂನಿಕೇಷನ್ ಸಂಸ್ಥೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.