ADVERTISEMENT

ವಿಶ್ವಬ್ಯಾಂಕ್ ಚುನಾವಣೆ: ಅಮೆರಿಕ: ಸೂಚಿತ ಅಭ್ಯಥಿಗೆ ಜಪಾನ್ ಬೆಂಬಲ

​ಪ್ರಜಾವಾಣಿ ವಾರ್ತೆ
Published 1 ಏಪ್ರಿಲ್ 2012, 19:30 IST
Last Updated 1 ಏಪ್ರಿಲ್ 2012, 19:30 IST

ಟೋಕಿಯೊ (ಪಿಟಿಐ): ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನದ ಚುನಾವಣೆಗೆ  ಅಮೆರಿಕ ಸೂಚಿಸಿರುವ ಜಿಮ್ ಯಂಗ್ ಕಿಮ್ ಅವರನ್ನು ಬೆಂಬಲಿಸುವುದಾಗಿ ಜಪಾನ್ ಭಾನುವಾರ ಘೋಷಿಸಿದೆ.`ವಿಶ್ವ ಬ್ಯಾಂಕ್ ಅನ್ನು ಮುನ್ನಡೆಸುವ ಜವಾಬ್ದಾರಿಗೆ ಕಿಮ್ ಸೂಕ್ತ ವ್ಯಕ್ತಿ. ಆದ್ದರಿಂದ ನಾವು ಅವರನ್ನು ಬೆಂಬಲಿಸುತ್ತೇವೆ~ ಎಂದು ಜಪಾನಿನ ಹಣಕಾಸು ಸಚಿವ ಜುನ್ ಅಜೂಮಿ ಹೇಳಿದ್ದಾರೆ.

ಆರೋಗ್ಯ ತಜ್ಞರಾದ ಜಿಮ್ ಯಂಗ್ ಕಿಮ್ ಟೋಕಿಯೊದ `ಡಾರ್ಟ್‌ಮೌತ್~ ಕಾಲೇಜಿನ ಅಧ್ಯಕ್ಷರಾಗಿದ್ದಾರೆ.
ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನದ ಆಕಾಂಕ್ಷಿಯಾದ ಕೊರಿಯಾ ಮೂಲದ ಕಿಮ್, ತಮ್ಮನ್ನು ಬೆಂಬಲಿಸುವಂತೆ ಕೋರಿ ಭಾರತ ಸೇರಿದಂತೆ ಏಷ್ಯಾದ ಏಳು ದೇಶಗಳಿಗೆ ಚುನಾವಣಾ ಪ್ರಚಾರದ ನಿಮಿತ್ತ ಪ್ರವಾಸ ಕೈಗೊಂಡಿದ್ದಾರೆ. ಚೀನಾ ಭೇಟಿ ಮುಗಿಸಿದ ಅವರು, ಜಪಾನ್‌ಗೆ ಆಗಮಿಸಿದ್ದಾರೆ.

ವಿಶ್ವ ಬ್ಯಾಂಕ್ ಅಧ್ಯಕ್ಷ ಸ್ಥಾನಕ್ಕೆ ಕಿಮ್ ಸೇರಿದಂತೆ ಮೂವರು ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.