ಲಂಡನ್ (ಪಿಟಿಐ): ಶಸ್ತ್ರಾಸ್ತ್ರ ಆಮದು ಕ್ಷೇತ್ರದಲ್ಲಿ ಭಾರತವು ಚೀನಾವನ್ನು ಹಿಂದಿಕ್ಕಿ ಮುಂಚೂಣಿ ಸ್ಥಾನದಲ್ಲಿ ನಿಂತಿದೆ. ವಿಶ್ವ ಶಸ್ತ್ರಾಸ್ತ್ರ ಮಾರುಕಟ್ಟೆಯಲ್ಲಿ ಭಾರತದ ಆಮದಿನ ಪ್ರಮಾಣ ಶೇ 10ರಷ್ಟು ಆಗಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಇದು ಶೇ 38ರಷ್ಟು ಏರಿಕೆ ಕಂಡಿದೆ ಎಂದು ಸ್ವೀಡನ್‌ನ ಚಿಂತಕರ ಚಾವಡಿ ತಿಳಿಸಿದೆ.
ಇನ್ನು ಚೀನಾ ಹಾಗೂ ಪಾಕಿಸ್ತಾನದ ಆಮದಿನ ಪ್ರಮಾಣ ತಲಾ ಶೇ 5ರಷ್ಟು ಇದೆ ಎಂದು ಸ್ಟಾಕ್‌ಹೋಂ ಅಂತರರಾಷ್ಟ್ರೀಯ ಶಾಂತಿ ಸಂಶೋಧನಾ ಸಂಸ್ಥೆ (ಎಸ್‌ಐಪಿಆರ್‌ಐ) ತಿಳಿಸಿದೆ. ಕಳೆದ ಐದು ವರ್ಷಗಳ ಅವಧಿಯಲ್ಲಿ ಪಾಕಿಸ್ತಾನವು ಚೀನಾದಿಂದ ಐವತ್ತು ಜೆಎಫ್-17 ವಿಮಾನಗಳನ್ನು ಮತ್ತು ಅಮೆರಿಕದಿಂದ 30 ಎಫ್-16 ವಿಮಾನಗಳನ್ನು ಆಮದು ಮಾಡಿಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.