ADVERTISEMENT

ಶಾಂತಿ ಸ್ಥಾಪನೆಗೆ ಮಾತುಕತೆ

ಗಡಿ ಗ್ರಾಮ ಪನ್ಮುಂಜಾಮ್‌ನಲ್ಲಿ ನಾಯಕರ ಸಭೆ

ಏಜೆನ್ಸೀಸ್
Published 1 ಜೂನ್ 2018, 19:30 IST
Last Updated 1 ಜೂನ್ 2018, 19:30 IST
ಉತ್ತರ ಕೊರಿಯಾ ಅಧ್ಯಕ್ಷ  ಕಿಮ್ ಜಾಂಗ್ ಉನ್ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್  ಜೇ- ಇನ್ (ಸಂಗ್ರಹ ಚಿತ್ರ).
ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಹಾಗೂ ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್ ಜೇ- ಇನ್ (ಸಂಗ್ರಹ ಚಿತ್ರ).   

ಸೋಲ್‌: ಎರಡು ದೇಶಗಳ ನಡುವಿನ ಉದ್ವಿಗ್ನ ಸ್ಥಿತಿ ಶಮನಗೊಳಿಸಲು ಹಾಗೂ ಶಾಂತಿ ಸ್ಥಾಪನೆಗೆ, ಮಾತುಕತೆ ನಡೆಸಲು ಉತ್ತರ ಮತ್ತು ದಕ್ಷಿಣ ಕೊರಿಯಾ ದೇಶಗಳು ಮುಂದಾಗಿವೆ.

ಉತ್ತರ ಕೊರಿಯಾದ ಗಡಿ ಗ್ರಾಮವಾದ ಪನ್ಮುಂಜಾಮ್‌ನಲ್ಲಿ ಜೂ.16 ರಂದು ಸೇನಾ ಅಧಿಕಾರಿಗಳ ಸಭೆ, 22 ರಂದು ರೆಡ್‌ ಕ್ರಾಸ್‌ ಸಂಸ್ಥೆಯ ನೇತೃತ್ವದಲ್ಲಿ ಶಾಂತಿ ಮಾತುಕತೆ ನಡೆಯಲಿದೆ.

ಅಲ್ಲದೆ ಏಷ್ಯನ್‌ ಗೇಮ್ಸ್‌ನಲ್ಲಿ ಪಾಲ್ಗೊಳ್ಳುವ ಕುರಿತು ಜೂನ್‌ 18ರಂದು ಪನ್ಮುಂಜಾಮ್‌ನಲ್ಲಿ ಎರಡು ದೇಶಗಳ ಅಧಿಕಾರಿಗಳ ಸಭೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ADVERTISEMENT

‘ಪರಮಾಣು ಅಸ್ತ್ರಗಳನ್ನು ನಿಯಂತ್ರಿಸಬೇಕೆಂದು ಅಮೆರಿಕ ಉತ್ತರ ಕೊರಿಯಾದ ಮೇಲೆ ರಾಜತಾಂತ್ರಿಕವಾಗಿ ಒತ್ತಡ ಹೇರುತ್ತಿದೆ. ಉತ್ತರ ಕೊರಿಯಾದ ಮೇಲೆ ನಂಬಿಕೆ ಇರಿಸುವಲ್ಲಿ ಇದು ನಿರ್ಣಾಯಕವಾಗಲಿದೆ’ ಎಂದು ದಕ್ಷಿಣ ಕೊರಿಯಾ ಹೇಳಿದೆ.

ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಉನ್‌ ಮತ್ತು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ನಡುವೆ ಜೂನ್‌ 12 ರಂದು ಸಿಂಗಾಪುರದಲ್ಲಿ ನಿಗದಿಯಾಗಿರುವ ಭೇಟಿಯ ಕುರಿತು ಚರ್ಚಿಸಲು ಉತ್ತರ ಕೊರಿಯಾದ ಸೇನಾ ಜನರಲ್‌ ಕಿಮ್‌ ಯಾಂಗ್‌ ಚೊಲ್‌ ನ್ಯೂಯಾರ್ಕ್‌ಗೆ ತೆರಳಿ ಅಮೆರಿಕದ ವಿದೇಶಾಂಗ ಸಚಿವ ಮೈಕ್‌ ಪೋಂಪಿಯೊ ಅವರ ಜೊತೆ ಚರ್ಚೆ ನಡೆಸಿದ್ದಾರೆ.

ಶೃಂಗಸಭೆಗೂ ಮುನ್ನ ಹಲವು ಸಭೆಕಳೆದ ತಿಂಗಳು ದಕ್ಷಿಣ ಕೊರಿಯಾ ಅಧ್ಯಕ್ಷ ಮೂನ್‌ ಜೇ ಇನ್‌ ಜೊತೆಗೆ ಉತ್ತರ ಕೊರಿಯಾ ಅಧ್ಯಕ್ಷ ಕಿಮ್‌ ಜಾಂಗ್‌ ಅವರು ಭೇಟಿಯಾದ ಬಳಿಕ ಸಭೆಗೆ ಮತ್ತೆ ಚಾಲನೆ ನೀಡಲಾಗಿತ್ತು. ಇನ್ನೂ ಬಗೆಹರಿಯದೇ ಉಳಿದಿರುವ ಹಲವು ವಿಚಾರಗಳಿಗೆ ಸಂಬಂಧಿಸಿದಂತೆ ಅಂತಿಮ ಒಪ್ಪಂದಕ್ಕೆ ಬರುವ ಸಂಬಂಧ ಮತ್ತಷ್ಟು ಸಭೆಗಳನ್ನು ನಡೆಸಲು ಉಭಯ ರಾಷ್ಟ್ರಗಳ ಮುಖ್ಯಸ್ಥರು ನಿರ್ಧರಿಸಿದ್ದರು. ಶುಕ್ರವಾರದ ಸಭೆ ಬಳಿಕ ಎರಡು ರಾಷ್ಟ್ರಗಳ ಮುಖಂಡರು ಜಂಟಿ ಹೇಳಿಕೆ ನೀಡಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.