ADVERTISEMENT

ಶ್ರೀಲಂಕಾ ಚುನಾವಣೆ: ಪಾರದರ್ಶಕ ಮತ ಪೆಟ್ಟಿಗೆ ಬಳಕೆ

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2013, 9:57 IST
Last Updated 21 ಸೆಪ್ಟೆಂಬರ್ 2013, 9:57 IST

ಕೊಲಂಬೊ (ಪಿಟಿಐ): ಸ್ವತಂತ್ರ ಹಾಗೂ   ಕ್ರಮಬದ್ಧ ಚುನಾವಣೆಯನ್ನು ಖಚಿತಪಡಿಸಲು ಶ್ರೀಲಂಕಾ, ಇದೇ ಮೊದಲ ಬಾರಿಗೆ ಆಯ್ದ ಮತ ಕೇಂದ್ರಗಳಲ್ಲಿ ಕಟ್ಟಿಗೆಯಿಂದ ತಯಾರಿಸಲಾದ ಪೆಟ್ಟಿಗೆಗಳ ಬದಲಾಗಿ    ಭಾರತದಿಂದ ಆಮದು ಮಾಡಿಕೊಂಡಿರುವ ಪಾರದರ್ಶಕ ಮತಪೆಟ್ಟಿಗೆಗಳನ್ನು ಶನಿವಾರ ಪರಿಚಯಿಸಿದೆ.

  ಮತ ಪಟ್ಟಿಗೆಗಳನ್ನು ಭಾರತದಿಂದ ಆಮದು ಮಾಡಿಕೊಳ್ಳಲಾಗಿದ್ದು, ಪ್ರಾಯೋಗಿಕ ಪರೀಕ್ಷಾರ್ಥವಾಗಿ  ಅವುಗಳನ್ನು ಬಳಸಲಾಗುತ್ತಿದೆ ಎಂದು ಶ್ರೀಲಂಕಾದ ಮುಖ್ಯ ಚುನಾವಣಾ ಆಯುಕ್ತ ಹೇಳಿದ್ದಾರೆ.

ಉತ್ತರ ಪ್ರಾಂತ್ಯದಲ್ಲಿ ಇಂದು (ಶನಿವಾರ) ಮಂಡಳಿಯ ಚುನಾವಣೆ ನಡೆಯುತ್ತಿದ್ದು, ಆಯ್ದ ಮತ ಕೇಂದ್ರಗಳಲ್ಲಿ  ಪಾರದರ್ಶಕ ಮತಪಟ್ಟಿಗೆಗಳನ್ನು ಇರಿಸಲಾಗಿದೆ ಎಂದು ಚುನಾವಣಾ ಮಂಡಳಿ ತಿಳಿಸಿದೆ.

  ಮತ ಪೆಟ್ಟಿಗೆಗಳನ್ನು ವ್ಯಾಪಕ ಪೊಲೀಸ್ ಬಿಗಿ ಭದ್ರತೆಯಲ್ಲಿ ಶುಕ್ರವಾರ ಮತ ಕೇಂದ್ರಗಳಿಗೆ ತಲುಪಿಸಲಾಗಿತ್ತು ಎಂದು ತಿಳಿದು ಬಂದಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.