ಪಾಕ್‌ನಿಂದ ಆಫ್ಘನ್‌ಗೆ ನ್ಯಾಟೊ ಟ್ರಕ್‌ಗಳ ಪಯಣ
ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನ ಕಳೆದ 7 ತಿಂಗಳಿಂದ ವಿಧಿಸಿದ್ದ ನಿರ್ಬಂಧವನ್ನು ಹಿಂತೆಗೆದುಕೊಂಡ ನಂತರ ಕರಾಚಿ ಬಂದರಿನಲ್ಲಿ ತಂಗಿದ್ದ ನ್ಯಾಟೊ ಮಿತ್ರಪಡೆಯ ತೈಲ ಟ್ಯಾಂಕರ್‌ಗಳು ಗುರುವಾರ ಆಫ್ಘಾನಿಸ್ತಾನಕ್ಕೆ ಪ್ರಯಾಣ ಬೆಳೆಸಿದವು.
3 ಭಾರತೀಯರನ್ನು ಕೊಂದವನಿಗೆ 35 ವರ್ಷ ಜೈಲು
ಮೆಲ್ಬರ್ನ್ (ಪಿಟಿಐ): ಭಾರತದ ಗೆಳತಿ ಹಾಗೂ ಆಕೆಯ ಇಬ್ಬರು ಒಡಹುಟ್ಟಿದವರನ್ನು ಸುಟ್ಟು ಕೊಂದ ಆಸ್ಟ್ರೇಲಿಯಾದ 42 ವಯಸ್ಸಿನ ವ್ಯಕ್ತಿಗೆ ಪೆರೋಲ್ ಮೇಲೆ ಹೊರ ಹೋಗಲು ಸಹ ಅವಕಾಶವಿಲ್ಲದಂತಹ 35 ವರ್ಷದ ಜೈಲು ಶಿಕ್ಷೆಯನ್ನು ಗುರುವಾರ ವಿಧಿಸಲಾಗಿದೆ.
ಕ್ವೀನ್ಸ್‌ಲೆಂಡ್ ಸುಪ್ರೀಂಕೋರ್ಟ್‌ನ ನ್ಯಾಯಾಧೀಶ ಜಾನ್ ಬಯ್ರನೆ ಅವರು 2003ರಲ್ಲಿ ಬ್ರಿಸ್ಬೇನ್‌ನಲ್ಲಿ ತನ್ನ ಮಾಜಿ ಗೆಳತಿ ನೀಲಮಾ ಸಿಂಗ್ (24) ಹಾಗೂ ಆಕೆಯ ಒಡಹುಟ್ಟಿದವರಾದ ಕುನಾಲ್ (18) ಮತ್ತು ಸಿಧಿ (12) ಅವರನ್ನು ಕೊಂದದ್ದಕ್ಕಾಗಿ ತಲಾ 3 ಜೀವಾವಧಿ ಶಿಕ್ಷೆ ಮೆಸ್ಸಿಮೊ `ಮಾಕ್ಸ್~ ಸಿಕಾಗೆ ವಿಧಿಸಿದರು.
ಫುಟ್ಬಾಲ್ ಆಟಗಾರನಿಗೆ 3 ವರ್ಷ ಜೈಲು ಶಿಕ್ಷೆ
ಬರ್ಲಿನ್ (ಐಎಎನ್‌ಎಸ್, ಇಎಫ್‌ಇ): ಜರ್ಮನಿಯಲ್ಲಿರುವ ತನ್ನ ಬಾಡಿಗೆ ಮನೆಯನ್ನು .ಸುಟ್ಟು ಹಾಕಿದ್ದಕ್ಕಾಗಿ ಬ್ರೆಜಿಲ್‌ನ ಮಾಜಿ ಫುಟ್ಬಾಲ್ ಆಟಗಾರ ಬ್ರೆನೊ ವಿನಿಸಿಯಸ್ ರೋಡ್ರಿಗಸ್ ಬೊರ್ಗೇಸ (22)ಗೆ ಮೂರು ವರ್ಷ, ಒಂಬತ್ತು ತಿಂಗಳ ಜೈಲು ಶಿಕ್ಷೆಯನ್ನು ಗುರುವಾರ ವಿಧಿಸಲಾಗಿದೆ.
ಸಿರಿಯಾ ಹಿಂಸಾಚಾರಕ್ಕೆ 100 ಜನ ಸಾವು
ಬೈರೂತ್ (ಎಎಫ್‌ಪಿ): ಬಂದೂಕುಧಾರಿಯೊಬ್ಬ ಸಿರಿಯಾದ ಜನರಲ್ ಸೇರಿದಂತೆ ಮೂವರು ಅಧಿಕಾರಿಗಳನ್ನು ಗುಂಡಿಕ್ಕಿ ಕೊಂದಿದ್ದು, ಒಂದೇ ದಿನ ದೇಶದಾದ್ಯಂತ ನಡೆದ ಹಿಂಸಾಚಾರದಲ್ಲಿ ಸುಮಾರು 100 ಜನ ಸಾವಿಗೀಡಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.