ADVERTISEMENT

ಸಂಕ್ಷಿಪ್ತ ಸುದ್ದಿ

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 19:59 IST
Last Updated 25 ಸೆಪ್ಟೆಂಬರ್ 2013, 19:59 IST

ಕೋರ್ಟ್‌ಗೆ ಮಾಜಿ ಜನರಲ್‌ ಮೊರೆ
ಲಾಹೋರ್‌ (ಪಿಟಿಐ):
ಪಾಕಿಸ್ತಾನದ ಮಾಜಿ ಸೇನಾಡಳಿತ­ಗಾರ ಪರ್ವೇಜ್‌ ಮುಷರಫ್‌ ಅವರು 1999ರಲ್ಲಿ ನಡೆ­ಸಿದ್ದ ಕ್ಷಿಪ್ರಕ್ರಾಂತಿಯಲ್ಲಿ ಸೇವೆಯಿಂದ ವಜಾ­ಗೊಂಡಿದ್ದ ಮಾಜಿ ಸೇನಾ ಮುಖ್ಯಸ್ಥ ಜಿಯಾವುದ್ದೀನ್‌ ಬಟ್‌ ಅವರು ಈಗ ನ್ಯಾಯಾಲಯದ ಮೆಟ್ಟಿಲೇರಿದ್ದಾರೆ.

ಕಾನೂನನ್ನು ಉಲ್ಲಂಘಿಸಿ ತಮ್ಮನ್ನು ವಜಾಗೊಳಿಸಲಾಗಿದೆ ಎಂದು ಘೋಷಿಸು­ವಂತೆ ಅವರು ಲಾಹೋರ್‌ ಹೈಕೋರ್ಟ್‌­­ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.ಜೊತೆಗೆ, ತಮ್ಮ ಬಂಧನದ ಬಳಿಕ ಸರ್ಕಾರ ವಶಪಡಿಸಿ­ಕೊಂಡ ಆಸ್ತಿ­ಗಳನ್ನು ವಾಪಸ್‌ ನೀಡುವಂತೆ ಮತ್ತು ಪಿಂಚಣಿ ಹಾಗೂ ನಿವೃತ್ತಿ ಭತ್ಯೆಗಳನ್ನು ಒದಗಿಸು­ವಂತೆಯೂ ಅವರು ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ.

ಸಾಂದ್ರ ನಕ್ಷತ್ರಪುಂಜ ಪತ್ತೆ
ವಾಷಿಂಗ್ಟನ್‌ (ಪಿಟಿಐ): ಒತ್ತೊತ್ತಾಗಿ ಅಸಂಖ್ಯಾತ ನಕ್ಷತ್ರ­ಗಳನ್ನು ಹೊಂದಿರುವ, ಇದುವರಗೆ ಕಾಣದಿದ್ದ ನಕ್ಷತ್ರಪುಂಜ­ವನ್ನು (ಗೆಲಾಕ್ಸಿ) ಖಗೋಳವಿಜ್ಞಾನಿಗಳು ಪತ್ತೆ­ಹಚ್ಚಿದ್ದಾರೆ.

ಇದು ನಮ್ಮ ತಾರಾಪುಂಜವಾದ ‘ಕ್ಷೀರಪಥ’ದಿಂದ 5.4 ಕೋಟಿ ಬೆಳಕಿನ ವರ್ಷಗಳಷ್ಟು ದೂರದಲ್ಲಿದೆ ಎಂದು ವಿಜ್ಞಾನಿ­ಗಳು ಹೇಳಿದ್ದಾರೆ.
ಹೊಸದಾಗಿ ಪತ್ತೆಹಚ್ಚಲಾಗಿರುವ ನಕ್ಷತ್ರ­­ಪುಂಜವನ್ನು ‘ಎಂ60–ಯುಸಿಡಿ1’ ಎಂದು ಕರೆಯಲಾಗಿದೆ. ವಿರ್ಗೊ ತಾರಾ­ಪುಂಜಗಳ ಸಮೂಹದಲ್ಲಿ  ಒತ್ತೊತ್ತಾಗಿ ಅಗಣಿತ ನಕ್ಷತ್ರಗಳನ್ನು ಹೊಂದಿರುವ ‘ಎಂ60–ಯುಸಿಡಿ1’ ಪತ್ತೆಯಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಲೈಂಗಿಕ ಹಿಂಸೆ ತಡೆ: 113 ದೇಶಗಳ ಸಹಿ
ವಿಶ್ವಸಂಸ್ಥೆ (ಎಪಿ):
ಸಂಘರ್ಷದಲ್ಲಿ ಲೈಂಗಿಕ ಹಿಂಸಾಚಾರ ಅಂತ್ಯಗೊಳಿಸಲು ಕ್ರಮ ಕೈಗೊಳ್ಳುವ ವಿಶ್ವ­ಸಂಸ್ಥೆಯ ಹೊಸ ಘೋಷ­ಣೆಗೆ ಜಗತ್ತಿನ 113 ರಾಷ್ಟ್ರಗಳು ಸಹಿ ಹಾಕಿವೆ.

ಸಿರಿಯಾದಲ್ಲಿ ವಿಶ್ವಸಂಸ್ಥೆ ತನಿಖಾ ತಂಡ
ಡಮಾಸ್ಕಸ್‌ (ಐಎಎನ್‌ಎಸ್‌):
ದೇಶ­ದಲ್ಲಿ ರಾಸಾಯನಿಕ ಅಸ್ತ್ರ ಬಳಸಿದ ಆರೋಪ ಕುರಿತು ತನಿಖೆ ಪೂರ್ಣಗೊಳಿ­ಸಲು ವಿಶ್ವಸಂಸ್ಥೆಯ ರಾಸಾಯನಿಕ ಅಸ್ತ್ರ ತನಿಖಾ ತಂಡ ಬುಧವಾರ ಸಿರಿಯಾಕ್ಕೆ ಮರಳಿದೆ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.

ಭಾರತ–ಚೀನಾ  ದ್ವಿಪಕ್ಷೀಯ ಮಾತುಕತೆ
ಬೀಜಿಂಗ್‌ (ಪಿಟಿಐ):
ಪ್ರಧಾನಿ ಮನ­ಮೋಹನ್‌ ಸಿಂಗ್‌ ಅವರು ಮುಂದಿನ ತಿಂಗಳು ಚೀನಾಗೆ ಭೇಟಿ ನೀಡಲಿರುವ ಹಿನ್ನೆಲೆಯಲ್ಲಿ ಉಭಯ ದೇಶಗಳ ಮಧೆ್ಯ ಕಗ್ಗಂಟಾಗಿರುವ ವಿವಿಧ ವಿಷಯಗಳ ಮೇಲಿನ ಉನ್ನತ ಅಧಿಕಾರಿಗಳ ಮಟ್ಟದ
ನಾಲ್ಕು ದಿನಗಳ ದ್ವಿಪಕ್ಷೀಯ ಮಾತುಕತೆ ಬುಧವಾರ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT