ADVERTISEMENT

‘ಸಂಬಂಧ ಈಗಷ್ಟೇ ಶುರು’

ಪಿಟಿಐ
Published 14 ಅಕ್ಟೋಬರ್ 2017, 19:30 IST
Last Updated 14 ಅಕ್ಟೋಬರ್ 2017, 19:30 IST

ವಾಷಿಂಗ್ಟನ್‌: ಪಾಕಿಸ್ತಾನ ಅಮೆರಿಕದಿಂದ ಬಹಳಷ್ಟು ಪ್ರಯೋಜನ ಪಡೆದಿದೆ. ಆದರೆ, ನಮ್ಮ ನಡುವೆ ನಿಜವಾದ ಸಂಬಂಧ ಈಗಷ್ಟೇ ಶುರುವಾಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಹೇಳಿದ್ದಾರೆ. ಹಕ್ಕಾನಿ ಭಯೋತ್ಪಾದಕ ಗುಂಪಿನಿಂದ ಅಮೆರಿಕ– ಕೆನಡಾ ಕುಟುಂಬವನ್ನು ರಕ್ಷಿಸಿದ ಪಾಕ್‌ ಬಗ್ಗೆ ಟ್ರಂಪ್‌ ಈ ಹೇಳಿಕೆ ನೀಡಿದ್ದಾರೆ.

ಅಮೆರಿಕ ಪ್ರಜೆ ಕೈಟ್ಲಾನ್‌ ಕೋಲ್‌ಮನ್‌ ಮತ್ತು ಪತಿ ಜೋಶುಅ ಬೊಯ್ಲೆ ಮತ್ತವರ ಮೂವರು ಮಕ್ಕಳನ್ನು ಭಯೋತ್ಪಾದಕ ಗುಂಪಿನಿಂದ ರಕ್ಷಣೆ ಮಾಡಲಾಗಿತ್ತು. 2012 ಈ ದಂಪತಿಯನ್ನು ಅಫ್ಗಾನಿಸ್ತಾನದಲ್ಲಿ ಪ್ರವಾಸ ಹೋಗಿದ್ದ ವೇಳೆ ಅಪಹರಣ ಮಾಡಲಾಗಿತ್ತು. ಅಪಹರಣಕಾರರ ವಶದಲ್ಲಿದ್ದಾಗಲೇ ಮೂರು ಮಕ್ಕಳು ಜನಿಸಿದ್ದರು.

ಪಾಕಿಸ್ತಾನವು ನಿರಂತರವಾಗಿ ಭಯೋತ್ಪಾದಕ ಗುಂಪುಗಳಿಗೆ ರಕ್ಷಣೆ ನೀಡುತ್ತಿದೆ ಎಂದು ಕಳೆದ ಆಗಸ್ಟ್‌ನಲ್ಲಿ ಟ್ರಂಪ್‌ ಎಚ್ಚರಿಕೆ ನೀಡಿದ್ದರು.

ADVERTISEMENT

‘ಪಾಕಿಸ್ತಾನ ಮತ್ತು ಅದರ ನಾಯಕರ ಜೊತೆ ಅಮೆರಿಕದ ಉತ್ತಮ ಸಂಬಂಧ ಆರಂಭಗೊಂಡಿದೆ. ಹಲವು ರಂಗಗಳಲ್ಲಿ ಪಾಕಿಸ್ತಾನವು ಅಮೆರಿಕಕ್ಕೆ ಸಹಕಾರ ನೀಡುತ್ತಿರುವುದಕ್ಕೆ ಧನ್ಯವಾದ’ ಎಂದು ಅವರು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.