
ಪ್ರಜಾವಾಣಿ ವಾರ್ತೆವಾಷಿಂಗ್ಟನ್ (ಪಿಟಿಐ): ಅತಿ ಹೆಚ್ಚು ಮುಸ್ಲಿಂ ಜನಸಂಖ್ಯೆ ಹೊಂದಿರುವ ಇಂಡೊನೇಷ್ಯಾ ಅಮೆರಿಕಕ್ಕೆ ಹಿಂದೂಗಳ ಜ್ಞಾನದೇವತೆ ಸರಸ್ವತಿ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದೆ.
11 ಅಡಿ ಉದ್ದದ ಕಮಲದ ಹೂವಿನ ಮೇಲೆ ಸರಸ್ವತಿ ಕುಳಿತಿರುವಂತೆ ಮೂರ್ತಿಯನ್ನು ರೂಪಿಸಲಾಗಿದೆ. ವಾಷಿಂಗ್ಟನ್‌ನಲ್ಲಿ ಮಹಾತ್ಮ ಗಾಂಧೀಜಿ ಅವರ ಮೂರ್ತಿಯನ್ನು ಪ್ರತಿಷ್ಠಾಪಿಸಿರುವ ಭಾರತದ ರಾಯಭಾರ ಕಚೇರಿ ಮುಂಭಾಗದಲ್ಲೇ ಈ ಸರಸ್ವತಿ ಮೂರ್ತಿಯನ್ನು ಸ್ಥಾಪಿಸಲಾಗಿದೆ.
ಎರಡೂ ದೇಶಗಳ ಸಾಂಸ್ಕೃತಿಕ ಬಾಂಧವ್ಯದ ದ್ಯೋತಕವಾಗಿ ಈ ಮೂರ್ತಿಯನ್ನು ಉಡುಗೊರೆಯಾಗಿ ನೀಡಲಾಗಿದೆ. ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಈ ಮೂರ್ತಿಯನ್ನು ನಿರ್ಮಿಸಲು ಆರಂಭಿಸಲಾಗಿತ್ತು. ಐ ನ್ಯೋಮನ್ ಸುದರ್ವ ಎಂಬ ಶಿಲ್ಪಿಯನ್ನೊಳಗೊಂಡಂತೆ ಇಂಡೊನೇಷ್ಯಾದ ಐವರು ಮೂರ್ತಿ ಸಿದ್ಧಪಡಿಸಿದ್ದಾರೆ ಎಂದು ಇಂಡೊನೇಷ್ಯಾ ರಾಯಭಾರಿ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.