ADVERTISEMENT

ಸರ್ಕಾರ, ಸೇನೆ ವಿರುದ್ಧ ಬಂಡಾಯ:ಪಾಕ್ ಜನತೆಗೆ ಜವಾಹಿರಿ ಕರೆ

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2012, 19:30 IST
Last Updated 17 ಮಾರ್ಚ್ 2012, 19:30 IST

ವಾಷಿಂಗ್ಟನ್ (ಪಿಟಿಐ): `ಅರಬ್ ದಂಗೆ~ಯ ಮಾದರಿಯಲ್ಲಿ ಸರ್ಕಾರ ಮತ್ತು ಸೇನೆಯ ವಿರುದ್ಧ ಬಂಡಾಯ ಏಳುವಂತೆ ಮತ್ತು ದೇಶದ ಸೇನೆಯನ್ನು ಅಮೆರಿಕದ ಗುಲಾಮರೆಂದು ಘೋಷಿ ಸುವಂತೆ ಪಾಕಿಸ್ತಾನ ಜನತೆಗೆ ಅಲ್‌ಖೈದಾ ಮುಖ್ಯಸ್ಥ ಐಮನ್ ಅಲ್-ಜವಾಹಿರಿ ಕರೆ ನೀಡಿದ್ದಾನೆ.

ಅಜ್ಞಾತ ಸ್ಥಳದಿಂದ ಜಿಹಾದಿ ಮುಸ್ಲಿಂ ವೇದಿಕೆಗಳಿಗೆ ಸುಮಾರು ಹತ್ತು ನಿಮಿಷಗಳ ವಿಡಿಯೊ ತಯಾರಿಸಿ ಕಳುಹಿಸಿರುವ ಜವಾಹಿರಿ, `ಪಾಕ್ ಸೇನೆ ಇಸ್ಲಾಂ ವಿರುದ್ಧದ ಸಮರದಲ್ಲಿ ಅಮೆರಿಕದೊಂದಿಗೆ ಪಾಲುದಾರಿಕೆ ಹೊಂದಿದೆ~ ಎಂದು ಆರೋಪಿಸಿದ್ದಾನೆ.

ಕಳೆದ ತಿಂಗಳು ಪಾಕಿಸ್ತಾನದಲ್ಲಿ ಅಲ್‌ಖೈದಾ ಒತ್ತೆಯಲ್ಲಿರಿಸಿಕೊಂಡಿರುವ ಅಮೆರಿಕದ ಹಿರಿಯ ಅಭಿವೃದ್ಧಿ ಪರಿಣತ ವಾರನ್ ವೀನ್‌ಸ್ಟೀನ್ ಅವರನ್ನು ಬಿಡುಗಡೆ ಮಾಡಲಾಗುವುದಿಲ್ಲ ಎಂದೂ ಈ ಈಜಿಪ್ಟ್‌ನ ಧಾರ್ಮಿಕ ನಾಯಕ ಹೇಳಿದ್ದಾನೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.