ADVERTISEMENT

ಸಾಕ್ಷರತೆ ವೃದ್ಧಿ: ಭಾರತಕ್ಕೆ 7 ಲಕ್ಷ ಡಾಲರ್ ನೆರವು

​ಪ್ರಜಾವಾಣಿ ವಾರ್ತೆ
Published 1 ಮೇ 2011, 19:30 IST
Last Updated 1 ಮೇ 2011, 19:30 IST

ಹ್ಯೂಸ್ಟನ್ (ಪಿಟಿಐ): ಇಲ್ಲಿನ ‘ಪ್ರಥಮ್ ಹ್ಯೂಸ್ಟನ್’ ಸ್ವಯಂ ಸೇವಾ ಸಂಸ್ಥೆಯು ಭಾರತದಲ್ಲಿ ಸಾಕ್ಷರತಾ ಪ್ರಮಾಣವನ್ನು ಏರಿಕೆ ಮಾಡುವ ಸಲುವಾಗಿ ಏಳು ಲಕ್ಷ ಡಾಲರ್‌ಗಳ ಅನುದಾನ ನೀಡುವುದಾಗಿ ಘೋಷಿಸಿದೆ.

ವಿಶ್ವದಾದ್ಯಂತ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ದೊರಕಬೇಕು ಎಂಬ ಉದಾತ್ತ ಉದ್ದೇಶಕ್ಕಾಗಿ ಶ್ರಮಿಸುತ್ತಿರುವ ಈ ಸಂಸ್ಥೆಯು ಭಾರತದಲ್ಲಿ ಅನಕ್ಷರತೆ ಪ್ರಮಾಣ ಹೆಚ್ಚಿರುವ ಕಾರಣ ತಾನು ನೀಡುವ ನೆರವನ್ನು ಏಳು ಲಕ್ಷ ಡಾಲರ್‌ಗಳಿಗೆ ಏರಿಕೆ ಮಾಡಿದೆ.

ಅನಕ್ಷರತೆ ತೊಡೆದು ಹಾಕಲು ಪಣತೊಟ್ಟಿರುವ ಈ ಸಂಸ್ಥೆ ಆಯೋಜಿಸಿದ್ದ ನಿಧಿ ಸಂಗ್ರಹ ಕಾರ್ಯಕ್ರಮದಲ್ಲಿ ಅಮೆರಿಕದಲ್ಲಿ ವಾಸವಿರುವ 750ಕ್ಕೂ ಹೆಚ್ಚು ಭಾರತೀಯರು ಭಾಗವಹಿಸಿದ್ದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.