ADVERTISEMENT

ಸಾವಿರಾರು ಮಕ್ಕಳು ಪೋಲಿಯೊ ಲಸಿಕೆ ವಂಚಿತರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2012, 19:30 IST
Last Updated 19 ಜೂನ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ): ಪೋಲಿಯೊ ಲಸಿಕಾ ಆಂದೋಲನವನ್ನು ತಾಲಿಬಾನ್ ನಿಷೇಧಿಸಿರುವ ಹಿನ್ನೆಲೆಯಲ್ಲಿ ಪಾಕಿಸ್ತಾನದ ಬುಡಕಟ್ಟು ಪ್ರದೇಶವಾದ ಉತ್ತರ ವಾಜಿರಿಸ್ತಾನದ 16 ಸಾವಿರ ಮಕ್ಕಳು ಲಸಿಕೆಯಿಂದ ವಂಚಿತರಾಗಲಿದ್ದಾರೆ.

ಅಮೆರಿಕ ಡ್ರೋಣ್ ದಾಳಿ ನ್ಲ್ಲಿಲಿಸುವವರೆಗೂ ಲಸಿಕಾ ಆಂದೋಲನವನ್ನು ನಿಷೇಧಿಸುವುದಾಗಿ ಉಗ್ರಗಾಮಿ ನಾಯಕರ ಮಂಡಳಿ ಘೋಷಿಸಿದೆ.

ನಿಷೇಧದ ಬೆನ್ನಲ್ಲೇ ಬುಡಕಟ್ಟು ಪ್ರದೇಶಗಳಾದ ಖೈಬರ್, ಬಜೌರ್, ಮೊಹಮಂದ್ ಹಾಗೂ ಕುರ‌್ರಂನಲ್ಲಿ ಸೋಮವಾರದಿಂದ ಲಸಿಕಾ ಆಂದೋಲನ ಪ್ರಾರಂಭಗೊಂಡಿದ್ದು, ಉಗ್ರರ ನಿಷೇಧದಿಂದಾಗಿ ಉತ್ತರ ವಾಜಿರಿಸ್ತಾನದಲ್ಲಿ ಮಾತ್ರ ಲಸಿಕಾ ಆಂದೋಲನ ಕೈಬಿಟ್ಟಿರುವುದಾಗಿ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ಬುಡಕಟ್ಟು ಪ್ರದೇಶಗಳಲ್ಲೇ ಪೋಲಿಯೊ ಪೀಡಿತರು ಹೆಚ್ಚಿದ್ದು, ಈ ಆಂದೋಲನದಲ್ಲಿ ಸುಮಾರು 7.77 ಲಕ್ಷ ಮಕ್ಕಳಿಗೆ ಪೋಲಿಯೊ ಲಸಿಕೆ ನೀಡುವ ಗುರಿ ಇತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.