ADVERTISEMENT

ಸಿಖ್ ಪರಿಸರ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 15 ಮಾರ್ಚ್ 2012, 19:30 IST
Last Updated 15 ಮಾರ್ಚ್ 2012, 19:30 IST

ಬೀಜಿಂಗ್ (ಪಿಟಿಐ):  ಸಿಖ್ ಸಮುದಾಯದ ಗುರು ಪ್ರಕೃತಿ ಹಾಗೂ ಪ್ರಾಣಿ ಪ್ರಿಯ ಗುರು ಹರ್ ರಾಯ್ ಅವರ ಜನ್ಮದಿನವಾದ ಮಾರ್ಚ್ 14 ರಂದು `ಸಿಖ್ ಪರಿಸರ ದಿನ~ವನ್ನಾಗಿ ವಿಶ್ವದೆಲ್ಲೆಡೆ ಇರುವ ಗುರದ್ವಾರ ಹಾಗೂ ಸಿಖ್ ಸಂಸ್ಥೆಗಳಲ್ಲಿ ಆಚರಿಸಲಾಯಿತು.

ಕಳೆದ ವರ್ಷ ವಾಷಿಂಗ್ಟನ್ ಮೂಲದ ಸಿಖ್ ಸಂಸ್ಥೆಯಾದ ಎಕೋ ಸಿಖ್ - ಈ ಪರಿಸರ ದಿನಾಚರಣೆಯ ಪರಿಕಲ್ಪನೆಯನ್ನು ಸಾಕಾರಗೊಳಿಸಿದೆ.
 
ಪರಿಣಾಮವಾಗಿ ಕಳೆದ ವರ್ಷ 450 ಸಿಖ್ ಸಂಸ್ಥೆಗಳು ಹಾಗೂ ಗುರುದ್ವಾರಗಳು ಗುರುವಿನ ಜನ್ಮ ದಿನವನ್ನು `ಪರಿಸರ ದಿನ~ವನ್ನಾಗಿ ಆಚರಿಸಿದವು.

ಇದಕ್ಕಾಗಿ ಈ ವರ್ಷ ಸುಮಾರು 700 ಸಿಖ್ ಸಂಸ್ಥೆಗಳು ಮತ್ತು ಗುರುದ್ವಾರಗಳು ಹೆಸರನ್ನು ನೋಂದಣಿ ಮಾಡಿಸಿವೆ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.