ಬೈರೂಟ್: ಐಸಿಸ್ ನಿಯಂತ್ರಿತ ಸಿರಿಯಾದ ರಕ್ಕಾ ಮೇಲೆ ಅಮೆರಿಕ ನಡೆಸಿದ ವಾಯುದಾಳಿ ವೇಳೆ ಒಟ್ಟು 42ಕ್ಕೂ ಹೆಚ್ಚು ನಾಗರಿಕರು ಮೃತಪಟ್ಟಿದ್ದಾರೆ.
ಸಿರಿಯಾದ ಉತ್ತರ ಭಾಗದಲ್ಲಿನ ನೆರೆಹೊರೆಯ ಪ್ರದೇಶಗಳ ಜನರಿಗೂ ತೊಂದರೆಯಾಗಿದೆ. ಮೃತರಲ್ಲಿ 19 ಮಕ್ಕಳು ಮತ್ತು 12 ಮಹಿಳೆಯರು ಸೇರಿದ್ದಾರೆ ಎಂದು ಸಿರಿಯಾದ ಮಾನವ ಹಕ್ಕುಗಳ ವೀಕ್ಷಣಾಲಯ ತಿಳಿಸಿದೆ.
ಎರಡು ದಿನಗಳಿಂದ ನಡೆಯುತ್ತಿರುವ ದಾಳಿಯಲ್ಲಿ ರಕ್ಕಾದಲ್ಲಿ ನಡೆದ ದಾಳಿ ಭೀಕರವಾಗಿದ್ದು ಸಾವಿನ ಸಂಖ್ಯೆ ಹೆಚ್ಚಳವಾಗಿದೆ ಎಂದು ಅಲ್ಲಿನ ಮೇಲ್ವಿಚಾರಕರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.