ADVERTISEMENT

ಸುನೀತಾ ಮತ್ತೆ ಅಂತರಿಕ್ಷಕ್ಕೆ

​ಪ್ರಜಾವಾಣಿ ವಾರ್ತೆ
Published 23 ಜೂನ್ 2012, 19:30 IST
Last Updated 23 ಜೂನ್ 2012, 19:30 IST
ಸುನೀತಾ ಮತ್ತೆ ಅಂತರಿಕ್ಷಕ್ಕೆ
ಸುನೀತಾ ಮತ್ತೆ ಅಂತರಿಕ್ಷಕ್ಕೆ   

ವಾಷಿಂಗ್ಟನ್ (ಪಿಟಿಐ): ಆರು ವರ್ಷಗಳ ಹಿಂದೆ, 2006ರಲ್ಲಿ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣದಲ್ಲಿ ಆರು ತಿಂಗಳ ಕಾಲ ಕಾರ್ಯ ನಿರ್ವಹಿಸಿ ದಾಖಲೆ ನಿರ್ಮಿಸಿದ್ದ ಭಾರತೀಯ ಮೂಲದ ಮಹಿಳಾ ಗಗನಯಾತ್ರಿ ಸುನೀತಾ ವಿಲಿಯಮ್ಸ ಅವರು ಜುಲೈ ತಿಂಗಳಲ್ಲಿ ಮತ್ತೆ ಬಾಹ್ಯಾಕಾಶಕ್ಕೆ ತೆರಳಲಿದ್ದಾರೆ.

  ಕಜಕ್‌ಸ್ತಾನದಲ್ಲಿರುವ ಬೈಕನೂರ್ ಕಾಸ್ಮೊಡ್ರೋಮ್‌ನಿಂದ  ಜುಲೈ 14ರಂದು ಸುನೀತಾ ಅಂತರಿಕ್ಷಕ್ಕೆ ಪ್ರಯಾಣಿಸಲಿದ್ದಾರೆ. ಅವರ ಜತೆಗೆ ಹಾರಾಟ ಎಂಜಿನಿಯರ್‌ಗಳಾದ ರಷ್ಯಾದ ಸಂಯುಕ್ತ ಬಾಹ್ಯಾಕಾಶ ಸಂಸ್ಥೆಯ ಯೂರಿ ಮಲೆಂಚೆಂಕೊ ಮತ್ತು ಜಪಾನಿನ ಬಾಹ್ಯಾಕಾಶ ಸಂಸ್ಥೆಯ ಅಕಿಹಿಕೊ ಹೊಶಿಡೆ ಅವರೂ ತೆರಳಲಿದ್ದಾರೆ ಎಂದು ನಾಸಾ ಹೇಳಿದೆ.

46 ವರ್ಷದ ಸುನೀತಾ ಬಾಹ್ಯಾಕಾಶ ನಿಲ್ದಾಣಕ್ಕೆ  ಯಾನ  ಕೈಗೊಳ್ಳುವ  ಸಂದರ್ಭದಲ್ಲಿ  ಹಾರಾಟ ಎಂಜಿನಿಯರ್ ಆಗಿ ಕಾರ್ಯನಿರ್ವಹಿಸಲಿದ್ದಾರೆ. ನೌಕೆಯು ನಿಲ್ದಾಣವನ್ನು ತಲುಪುತ್ತಿದ್ದಂತೆಯೇ ಅವರು ತಂಡದ ಕಮಾಂಡರ್ ಆಗಲಿದ್ದಾರೆ.

ಸುನೀತಾ ವಿಲಿಯಮ್ಸ ಅವರ ತಂದೆ ಮೂಲತಃ ಗುಜರಾತ್‌ನವರಾಗಿದ್ದಾರೆ. 1998ರಲ್ಲಿ ನಾಸಾವು ಸುನಿತಾ ಅವರನ್ನು ಗಗನಯಾತ್ರಿಯನ್ನಾಗಿ ಆಯ್ಕೆ ಮಾಡಿತ್ತು.

ಅಂತರಿಕ್ಷದಲ್ಲಿ ಅತಿ ಹೆಚ್ಚು ಸಮಯವನ್ನು (195 ದಿನಗಳು) ಕಳೆದ  ಮೊದಲ ಮಹಿಳಾ ಗಗನಯಾನಿ ಎಂಬ ಹೆಗ್ಗಳಿಕೆಗೆ  ಸುನೀತಾ ವಿಲಿಯಮ್ಸ ಪಾತ್ರರಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.