ADVERTISEMENT

ಸುಮಾರು 400 ವರ್ಷ ನಂತರ ಅಂತ್ಯಕ್ರಿಯೆ!

ಏಜೆನ್ಸೀಸ್
Published 23 ಮೇ 2018, 19:30 IST
Last Updated 23 ಮೇ 2018, 19:30 IST

ಹೇಗ್‌ (ಎಎಫ್‌ಪಿ): ಸುಮಾರು 400 ವರ್ಷಗಳ ಹಿಂದೆ ನಡೆದ ಯುದ್ಧದಲ್ಲಿ ಮರಣ ಹೊಂದಿದ್ದ ಕರ್ನಲ್‌ ಶೆಲ್ಟೆ ವ್ಯಾನ್ ಐಸ್ಮಾ ಅಂತ್ಯಕ್ರಿಯೆ ನೆದರ್‌ಲ್ಯಾಂಡ್ಸ್‌ನಲ್ಲಿ
ಮಿಲಿಟರಿ ಗೌರವದೊಂದಿಗೆ ಬುಧವಾರ ನೆರವೇರಿ ಸಲಾಯಿತು.

‘ಸ್ಪೇನ್‌ ಆಳ್ವಿಕೆಯಿಂದ ಸ್ವಾತಂತ್ರ್ಯ ಪಡೆಯಲು 1637ರಲ್ಲಿ ನಡೆದಿದ್ದ ಹೋರಾಟದಲ್ಲಿ ಕರ್ನಲ್‌ ಸಾವನ್ನಪ್ಪಿದ್ದರು. ಆದರೆ, ಸಾವು ಹೇಗೆ ಸಂಭವಿಸಿತು ಎಂಬ ಮಾಹಿತಿ ಇಲ್ಲ’ ಎಂದು ನೆದರ್‌ಲ್ಯಾಂಡ್ಸ್‌ ಸೇನೆ ತಿಳಿಸಿದೆ.

ಐಸ್ಮಾ ಧರಿಸಿದ್ದ ಹೆಲ್ಮೆಟ್‌ ಅನ್ನು ಡಚ್‌ ನ್ಯಾಷನಲ್‌ ಮಿಲಿಟರಿ ಮ್ಯೂಸಿಯಂ ಅಧಿಕಾರಿಗಳು 2015ರಲ್ಲಿ ಶೆಟ್ಟೆನ್‌ ಎಂಬಲ್ಲಿನ ಚರ್ಚ್‌ನಲ್ಲಿ ಪತ್ತೆ ಹಚ್ಚಿದರು. ಅಂತಿಮವಾಗಿ ಡಿಎನ್‌ಎ ಪರೀಕ್ಷೆಯಿಂದ ದೃಢಪಟ್ಟಿತು ಎಂದು ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.