ADVERTISEMENT

ಸೆಕ್ಸ್‌ಟಿಂಗ್ ಜನಪ್ರಿಯತೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2012, 19:30 IST
Last Updated 5 ಜುಲೈ 2012, 19:30 IST

ವಾಷಿಂಗ್ಟನ್ (ಪಿಟಿಐ): ಲೈಂಗಿಕ ಚಟುವಟಿಕೆಗಳಿಗೆ ಸಂಬಂಧಿಸಿದಂತೆ ಮೊಬೈಲ್, ಅಂತರ್ಜಾಲ, ಸಾಮಾಜಿಕ ಸಂಪರ್ಕ ತಾಣಗಳಲ್ಲಿ ಕಾಮೋದ್ರೇಕ ಮಾತುಕತೆ, ಅಶ್ಲೀಲ ಸಂದೇಶ, ಸ್ವಂತ ನಗ್ನ ಚಿತ್ರಗಳ ವಿನಿಮಯ (ಸೆಕ್ಸ್‌ಟಿಂಗ್) ಮಾಡಿಕೊಳ್ಳುವ ಪ್ರವೃತ್ತಿಯು ಅಮೆರಿಕದ ಯುವ ಜನಾಂಗದಲ್ಲಿ ಹೆಚ್ಚು ಜನಪ್ರಿಯಗೊಳ್ಳುತ್ತಿದೆ.

ಇಂತಹ ಕೃತ್ಯಗಳ ಬಗ್ಗೆ ನಿರಾಸಕ್ತಿಯ ಹೊರತಾಗಿಯೂ ಅಮೆರಿಕದ ಶೇ 30ರಷ್ಟು ಹದಿಹರೆಯದವರು ತಮ್ಮ ಬೆತ್ತಲೆ ಚಿತ್ರಗಳನ್ನು ಮೊಬೈಲ್ ಅಥವಾ ಅಂತರ್ಜಾಲದ ಮೂಲಕ ಸ್ನೇಹಿತರಿಗೆ ರವಾನಿಸುತ್ತಿದ್ದಾರೆ.

ಟೆಕ್ಸಾಸ್ ನಗರದ 14ರಿಂದ 19 ವರ್ಷದೊಳಗಿನ ಸಾವಿರ ಯುವಕರ ಮೇಲೆ ನಡೆಸಿದ ಅಧ್ಯಯನದಿಂದ ಈ ಸಂಗತಿ ಬೆಳಕಿಗೆ ಬಂದಿದೆ.  ಈ ವಯೋಮಾನದವರಲ್ಲಿ `ಸೆಕ್ಸ್‌ಟಿಂಗ್~ ಸಾಮಾನ್ಯವಾಗಿದ್ದು ಶೇ 28ಕ್ಕೂ ಹೆಚ್ಚು ಯುವಕರು ತಮ್ಮ `ನಗ್ನ ದೇಹಸಿರಿ~ಯನ್ನು ಮೊಬೈಲ್ ಅಥವಾ ಅಂತರ್ಜಾಲದ ಮೂಲಕ ಮುಕ್ತವಾಗಿ ಅನ್ಯರ ವೀಕ್ಷಣೆಗೆ ಹರಿಯಬಿಡುತ್ತಿದ್ದಾರೆ. ಇಂಥ ಚಿತ್ರಗಳಿಗಾಗಿ ತಮಗೂ ಬೇಡಿಕೆ ಬಂದಿದೆ ಎಂದು ಶೇ 31ರಷ್ಟು ಯುವಕ, ಯುವತಿಯರು ಬಾಯಿ ಬಿಟ್ಟಿದ್ದಾರೆ.

`ಸೆಕ್ಸ್‌ಟಿಂಗ್~ನಲ್ಲಿ ತೊಡಗಿರುವ ಯುವ ಜನಾಂಗ ತಮ್ಮ ಇತರ ವಾರಗೆಯವರಿಗಿಂತ ಹೆಚ್ಚು ಕಾಮಾಸಕ್ತರಾಗಿರುವುದೂ ಅಧ್ಯಯನದಿಂದ ಬೆಳಕಿಗೆ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.