
ಪ್ರಜಾವಾಣಿ ವಾರ್ತೆಬೀಜಿಂಗ್ (ಪಿಟಿಐ): ರಕ್ಷಣಾ ರಂಗಕ್ಕೆ ಸಂಬಂಧಿಸಿದಂತೆ ಭಾರತದ ಜತೆ ದೊಡ್ಡ ಮಟ್ಟದಲ್ಲಿ ಸಂಬಂಧ ಹೊಂದಿದರೆ ಎರಡೂ ರಾಷ್ಟ್ರಗಳ ಮಧ್ಯೆ ವಿಶ್ವಾಸ ಮತ್ತು ನಂಬಿಕೆ ಬಲಪಡುತ್ತದೆ ಎಂದು ಚೀನಾ ತಿಳಿಸಿದೆ.
ಸೇನಾ ವಿಚಾರದಲ್ಲಿ ಭಾರತದ ಜತೆ ಉತ್ತಮ ಬಾಂಧವ್ಯ ಹೊಂದಲು ಚೀನಾ ಆಸಕ್ತಿ ತೋರಿಸಿರುವುದು ಮಹತ್ವದ ಬೆಳವಣಿಗೆಯಾಗಿದೆ. ದೆಹಲಿಯಲ್ಲಿ ನಡೆಯಲಿರುವ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಲು ಬುಧವಾರ ಚೀನಾ ಅಧ್ಯಕ್ಷ ಹೂ ಜಿಂಟಾವೊ ಅವರು ಭಾರತಕ್ಕೆ ಭೇಟಿ ನೀಡುತ್ತಿರುವ ಸಂದರ್ಭದಲ್ಲಿ ಚೀನಾದ ವಿದೇಶಾಂಗ ಖಾತೆಯ ಏಷ್ಯಾ ವಿಭಾಗದ ಉಪ ಮಹಾ ನಿರ್ದೇಶಕ ಸನ್ ವೆಡಾಂಗ್ ಅವರು ಭಾರತದ ಜತೆಗೆ ಉತ್ತಮ ಸೇನಾ ಬಾಂಧವ್ಯ ಹೊಂದುವುದರ ಬಗ್ಗೆ ಚೀನಾಕ್ಕೆ ಹೆಚ್ಚಿನ ಆಸಕ್ತಿ ಇದೆ ಎಂದು ತಿಳಿಸಿರುವುದು ಪ್ರಸ್ತುತ ಸನ್ನಿವೇಶದಲ್ಲಿ ಮಹತ್ವ ಪಡೆದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.